ನ್ಯೂಸ್ ನಾಟೌಟ್: ದೇಶ ಸೇವೆ ಮಾಡುವ ಕನಸು ಎಲ್ಲರಿಗೂ ಇರುತ್ತದೆ. ಆದರೆ ಅದಕ್ಕೊಂದು ಉತ್ತಮ ವೇದಿಕೆ ಸಿಕ್ಕಿರುವುದಿಲ್ಲ. ಆದರೆ ಇದೀಗ ಯುವಕ-ಯುವತಿಯರಿಗೆ ಅಗ್ನಿಪಥ್ ಮೂಲಕ ಸೈನ್ಯ ಸೇರುವ ಸುವರ್ಣಾವಕಾಶವನ್ನು ಕೇಂದ್ರ ಸರಕಾರ ಒದಗಿಸಿದೆ.
ಕಾಣಿಯೂರಿನ ಹುಡುಗಿ ಪೌರ್ಶಿ ವಿ ರೈ ಅಗ್ನಿಪಥ್ ನೇಮಕಾತಿಯಡಿ ಭಾರತೀಯ ನೌಕಾ ಸೇನೆಗೆ ಸೇರಲು ಸಿದ್ಧವಾಗಿದ್ದಾಳೆ. ಆದರೆ ಸರಕಾರಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಸೀಟು ಬಯಸಿ ಪರೀಕ್ಷೆ ಬರೆದಿರುವುದರಿಂದ ಸಹಜವಾಗಿ ಪೌರ್ಶಿ ವಿ ರೈ ಗೆ ಅಲ್ಲಿಂದ ಈಗ ಮೂಲ ಅಂಕ ಪ್ರತಿ ನೀಡುತ್ತಿಲ್ಲ. ಇದರಿಂದ ಅವರಿಗೆ ನವೆಂಬರ್ 24 ರಂದು ಒಡಿಶಾದಲ್ಲಿ ನಡೆಯಲಿರುವ ನೌಕಾ ಸೇನೆಯ ವೈದ್ಯಕೀಯ ಪರೀಕ್ಷೆಯಲ್ಲಿ ಭಾಗವಹಿಸುವುದಕ್ಕೆ ಕಷ್ಟವಾಗಿದೆ ಎಂದು ತಿಳಿದು ಬಂದಿದೆ. ಪೌರ್ಶಿ ವಿ ರೈ ಕಡಬ ತಾಲೂಕಿನ ಕಾಣಿಯೂರು ಸಮೀಪದ ದೋಳ್ಪಾಡಿ ಗ್ರಾಮದ ಪಿಜಕ್ಕಳ ನಿವಾಸಿ ವೇದವ್ಯಾಸ ರೈ ಮತ್ತು ನವೀನ .ವಿ. ರೈ ದಂಪತಿಗಳ ಪುತ್ರಿ. ಈಕೆ ಪುತ್ತೂರಿನ ಅಂಬಿಕಾ ವಿದ್ಯಾ ಸಂಸ್ಥೆಯಲ್ಲಿ ಪಿಯುಸಿ ಪೂರೈಸಿದ್ದಾರೆ ಇವರು ಪುತ್ತೂರಿನ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಕೇಂದ್ರವಾಗಿರುವ ವಿದ್ಯಾಮಾತಾ ಅಕಾಡೆಮಿಯಲ್ಲಿ ಅಗ್ನಿಪಥ್ ನೇಮಕಾತಿಗೆ ಸಂಬಂಧಿಸಿದಂತೆ ನಡೆದ ತರಬೇತಿಯ ತಯಾರು ನಡೆಸಿದ್ದಾರೆ. ಅಕ್ಟೋಬರ್ 13 ರಂದು ನೌಕಾನೆಲೆ ಕೊಚ್ಚಿಯಲ್ಲಿ ದೈಹಿಕ ಕ್ಷಮತೆಯ ಪರೀಕ್ಷೆ ನಡೆದಿದ್ದು ಉತ್ತೀರ್ಣರಾಗಿದ್ದರು.