ನ್ಯೂಸ್ ನಾಟೌಟ್: ಅತೀ ಹೆಚ್ಚಿನ ಸಕ್ರಿಯ ಬಳಕೆದಾರರನ್ನು ಹೊಂದಿರುವ ಜನಪ್ರಿಯ ಇನ್ಸ್ಟಂಟ್ ಮೆಸೆಜ್ ಅಪ್ಲಿಕೇಶನ್ ವಾಟ್ಸಾಪ್ (WhatsApp) ಇದೀಗ ಆಪಲ್ ಐಫೋನ್ ಬಳಕೆದಾರರಿಗೆ ಬಿಗ್ ಶಾಕ್ ತಿಳಿಸಿದೆ. ಆಪಲ್ ಸಂಸ್ಥೆಯ ಇತ್ತೀಚಿನ ಅಪ್ಡೇಟ್ ಪ್ರಕಾರ ಇದೇ ಅಕ್ಟೋಬರ್ 24 ರಿಂದ ಹಳೆಯ ಐಓಎಸ್ (iOS) ನಲ್ಲಿ ಕಾರ್ಯನಿರ್ವಹಿಸುತ್ತಿರುವ ಕೆಲವು ಐಫೋನ್ಗಳಲ್ಲಿ ವಾಟ್ಸಾಪ್ ಕೆಲಸ ಮಾಡುವುದನ್ನು ನಿಲ್ಲಿಸಲಿದೆ ಎಂದು ಸೂಚಿಸಿದೆ.
ಹೌದು, ಆಪಲ್ iOS 10 ಮತ್ತು iOS 11 ನಲ್ಲಿ ಕಾರ್ಯನಿರ್ವಹಿಸುತ್ತಿರುವ ಐಫೋನ್/ ಡಿವೈಸ್ಗಳಲ್ಲಿ ಇದೇ ಅಕ್ಟೋಬರ್ 24 ರಿಂದ ವಾಟ್ಸಾಪ್ (WhatsApp) ಅಪ್ಲಿಕೇಶನ್ ಬೆಂಬಲಿಸುವುದನ್ನು ನಿಲ್ಲಿಸುತ್ತದೆ. ವಾಟ್ಸಾಪ್ ಇನ್ನು ಮುಂದೆ iOS 10 ಅಥವಾ iOS 11 ನಲ್ಲಿ ಕಾರ್ಯನಿರ್ವಹಿಸುವುದಿಲ್ಲ ಎಂದು ವಾಟ್ಸಾಪ್ ಬಳಕೆದಾರರಿಗೆ ತಿಳಿಸಲು ಪ್ರಾರಂಭಿಸಿದೆ.
ವಾಟ್ಸಾಪ್ ಆಪ್ ಬಳಕೆ ಮುಂದುವರಿಸಲು, ಬಳಕೆದಾರರು ತಮ್ಮ iOS ಓಎಸ್ ಅನ್ನು ಅಪ್ಡೇಟ್ ಮಾಡಲು ಸಂಸ್ಥೆಯು ತ್ವರಿತ ಮೆಸೆಜ್ ಕಳುಹಿಸುವ ಮೂಲಕ ಸೂಚಿಸಿದೆ. ಇನ್ನು ವಾಟ್ಸಾಪ್ (WhatsApp) ಸಹಾಯ ಕೇಂದ್ರದ ಪುಟದ ಪ್ರಕಾರ, ಐಫೋನ್ ಬಳಕೆದಾರರು ವಾಟ್ಸಾಪ್ ಆಪ್ ಅನ್ನು ಬಳಕೆ ಮಾಡುವುದನ್ನು ಮುಂದುವರಿಸಲು iOS 12 ಅಥವಾ ಅದಕ್ಕೂ ಮೇಲಿನ (ಇತ್ತೀಚಿನ) ಓಎಸ್ ಹೊಂದಿರುವುದು ಅಗತ್ಯವಿದೆ.