ನ್ಯೂಸ್ ನಾಟೌಟ್ : ಮಂಗಳೂರು ಮೂಲದ ಯುವಕನೋರ್ವ ಕಡಬದ ಯುವಕರ ತಂಡದಿಂದ ಹನಿಟ್ರ್ಯಾಪ್ ಗೆ ಒಳಗಾಗಿರುವ ಘಟನೆ ನಡೆದಿದೆ. ಈ ಸಂಬಂಧ ಪರಾರಿಯಾಗಲು ಯತ್ನಿಸಿದ ಓರ್ವನನ್ನು ಕಡಬ ಪೋಲಿಸರು ಸಿನಿಮೀಯ ರೀತಿಯಲ್ಲಿ ವಶಕ್ಕೆ ತೆಗೆದುಕೊಂಡ ಘಟನೆ ಬುಧವಾರ ರಾತ್ರಿ ಕಡಬದಲ್ಲಿ ನಡೆದಿದೆ.
ಹುಡುಗಿಯ ಹೆಸರಿನಲ್ಲಿ ನಕಲಿ ಫೇಸ್ಬುಕ್ ಖಾತೆ ತೆರೆದ ಕಡಬ ಮರ್ದಾಳದ ಮುಸ್ಲಿಂ ಯುವಕರ ತಂಡವೊಂದು ಮಂಗಳೂರಿನ ಯುವಕನನ್ನು ಬುಟ್ಟಿಗೆ ಬೀಳಿಸಿ ಮಂಗಳವಾರ ತಡರಾತ್ರಿ ಕಡಬಕ್ಕೆ ಕರೆಸಿದ್ದಾರೆ ಎನ್ನಲಾಗಿದೆ. ಬಳಿಕ ಕೆರ್ಮಾಯಿ ಕೋರಿಯಾರ್ ಭಾಗಕ್ಕೆ ಕೊಂಡೊಯ್ದು ಹಲ್ಲೆ ನಡೆಸಿದ್ದಲ್ಲದೆ ಹಣ ನೀಡದಿದ್ದರೆ ಹುಡುಗಿಯ ವಿಚಾರದಲ್ಲಿ ಸಾಮಾಜಿಕ ಜಾಲತಾಣದಲ್ಲಿ ಫೊಟೋ ವೈರಲ್ ಮಾಡುವುದಾಗಿ ಬೆದರಿಸಿ ಹಣ ತರುವಂತೆ ಹಲ್ಲೆ ನಡೆಸಿರುವುದಾಗಿ ತಿಳಿದುಬಂದಿದೆ.