ನ್ಯೂಸ್ ನಾಟೌಟ್ : ಮತಾಂಧತೆಯ ಮದ ತುಂಬಿದ ದುಷ್ಟ ಶಕ್ತಿಗಳ ಕೃತ್ಯಕ್ಕೆ ಬಲಿಯಾದ ಬಿಜೆಪಿ ಯುವ ಮೋರ್ಚಾ ನಾಯಕ ಪ್ರವೀಣ್ ನೆಟ್ಟಾರ್ ಅವರ ಪತ್ನಿ ನೂತನ ಅವರು ಶುಕ್ರವಾರ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರನ್ನು ಭೇಟಿಯಾದರು. ಇದೇ ವೇಳೆ ಸರಕಾರ ವತಿಯಿಂದ ನೀಡಿರುವ ಸಹಕಾರಕ್ಕೆ ಧನ್ಯವಾದಗಳನ್ನು ಸಮರ್ಪಿಸಿದರು.
ಬೆಂಗಳೂರಿನ ಸಿಎಂ ಕಚೇರಿಯಲ್ಲಿ ನೂತನರಿಗೆ ಉದ್ಯೋಗ ನೀಡಲಾಗಿತ್ತು, ನೂತನರವರು ಈ ಉದ್ಯೋಗವನ್ನು ಮಂಗಳೂರಿನಲ್ಲಿ ನೀಡುವಂತೆ ಮನವಿ ಮಾಡಿದ್ದರು. ಅದನ್ನು ಪುರಸ್ಕರಿಸಿದ ಸಿಎಂ ಮಂಗಳೂರಿನಲ್ಲಿ ಉದ್ಯೋಗ ನೀಡುವುದಕ್ಕೆ ಆದೇಶ ನೀಡಿದ್ದಾರೆ.
ಬೆಳ್ಳಾರೆ ಬಿಜೆಪಿ ಮುಖಂಡ ಆರ್.ಕೆ.ಭಟ್ ಕುರುಂಬುಡೇಲು, ಗ್ರಾಮ ಪಂಚಾಯತ್ ಅಧ್ಯಕ್ಷ ಚಂದ್ರಶೇಖರ ಪನ್ನೆ, ಪ್ರವೀಣ್ ನೆಟ್ಟಾರು ಅವರ ಚಿಕ್ಕಪ್ಪ ಜಯರಾಮ ಕಾರ್ಯಾಡಿ, ಮಾವ ಲೋಕೇಶ್ ಪೂಜಾರಿ, ಭಾವ ರಂಜಿತ್, ನೂತನ ಅವರ ಸಹೋದರ ಶಿವ ಪ್ರಸಾದ್ ಉಪಸ್ಥಿತರಿದ್ದರು.