ನ್ಯೂಸ್ ನಾಟೌಟ್: ಬೆಂಗಳೂರಿಗೆ ಹೊರಟಿದ್ದ ನೆಲ್ಯಾಡಿಯ ಉಪನ್ಯಾಸಕಿಯೊಬ್ಬರು ತಾವು ತೆರಳಬೇಕಿದ್ದ ರೈಲನ್ನು ಬಿಟ್ಟು ಅದೇ ರೈಲಿನಲ್ಲಿ ತೆರಳಲು ಬಂದು ಅಸ್ವಸ್ಥಗೊಂಡು ಬಿದ್ದ ಪ್ರಯಾಣಿಕರೊಬ್ಬರ ಪ್ರಾಣ ಉಳಿಸಿದ ಘಟನೆ ಬಂಟ್ವಾಳ ರೈಲ್ವೇ ನಿಲ್ದಾಣದಲ್ಲಿ ನಡೆದಿದೆ.
ಅತ್ತ ರೈಲು ಬರುತ್ತಿದ್ದಂತೆಯೇ ಇನ್ನೇನು ಬ್ಯಾಗ್ ಗಳನ್ನು ಹೊತ್ತು ರೈಲು ಏರಬೇಕು ಅನ್ನುವಷ್ಟರಲ್ಲಿ , ಹಿಂದಿದ್ದ ಪ್ರಯಾಣಿಕರೊಬ್ಬರು ಬಿದ್ದುಬಿಟ್ಟಿದ್ದಾರೆ. ತಕ್ಷಣ ಉಪನ್ಯಾಸಕಿ ಬಿದ್ಧ ಆ ವ್ಯಕ್ತಿಗೆ ಉಪಚಾರ ನೀಡಿ, ಆಸ್ಪತ್ರೆಗೆ ಸಾಗಿಸಿ, ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿಗೆ ಕಳುಹಿಸಿಕೊಡುತ್ತಾರೆ . ಹೀಗಾಗಿ ತಾವು ಪ್ರಯಾಣಿಸಬೇಕಾಗಿದ್ದ ರೈಲು ತಪ್ಪಿ ಹೋಗಿದೆ.
ನೆಲ್ಯಾಡಿಯ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕಿಯಾಗಿರುವ ಹೇಮಾವತಿ ಸೆ.28ರಂದು ಬಂಟ್ವಾಳದಿಂದ ಬೆಂಗಳೂರಿಗೆ ಹೋಗಲು ರೈಲ್ವೆ ನಿಲ್ದಾಣದಲ್ಲಿ ಕಾದು ಕುಳಿತಿದ್ದರು. ರೈಲುಬಂತು ಅತ್ತ ಹೋಗಬೇಕು ಎನ್ನುವಷ್ಟರಲ್ಲಿ ಎಲ್ಲವೂ ನಡೆದು ಹೋಗಿತ್ತು..’ಆ ವ್ಯಕ್ತಿ ಬೆವರುತ್ತಿದ್ದರು. ಮೈ ತಣ್ಣಗಿತ್ತು. ಆಂಬ್ಯುಲೆನ್ಸ್ಗೆ ಕರೆ ಮಾಡಲು ಪ್ರಯತ್ನಿಸಿದರು. ಆ ಸಂದರ್ಭ ರೈಲು ಹೊರಟು ಹೋಯಿತು. ಸುತ್ತಲೂ ಯಾರೂ ಇರಲಿಲ್ಲ. ತಕ್ಷಣ ಆಟೋ ರಿಕ್ಷಾ ಹಿಡಿದು ಬಿ.ಸಿ ರೋಡಿನ ಸೋಮಯಾಜಿ ಆಸ್ಪತ್ರೆಗೆ ಹೋದೆ. ಅವರು ಚೇತರಿಸಿಕೊಂಡರು. ಅಲ್ಲಿಂದ ಆ ವ್ಯಕ್ತಿ ಸಂಬಂಧಿಕರ ಸಂಖ್ಯೆಯನ್ನು ನೀಡಿದರು. ಸಂಬಂಧಿಕರು ಬಂದ ಬಳಿಕ ಕೂಡಲೇ ಅವರನ್ನು ಕೆಎಂಸಿ ಮಂಗಳೂರಿಗೆ ಕರೆದೊಯ್ಯಲಾಯಿತು. ನಾನು ಮರುದಿನ ಬಸ್ನಲ್ಲಿ ಬೆಂಗಳೂರಿಗೆ ಹೊರಟೆ’ ಎಂದು ಹೇಮಾವತಿ ನಡೆದ ಘಟನೆ ವಿವರಿಸುತ್ತಾರೆ.