ನ್ಯೂಸ್ ನಾಟೌಟ್: ವ್ಯಕ್ತಿಯೊಬ್ಬರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ.
ಜಯಾನಂದ ಆಚಾರ್ಯ ಕೊಲೆಯಾದವರು. ಕುಂಜತ್ತ್ ಬೈಲ್ ದೇವಿನಗರ ರಾಜೇಶ್ ಪೂಜಾರಿ ಪ್ರಕರಣದ ಆರೋಪಿ. ನಗರದ ಹರಿಪದವು ಕಿಯೋನಿಕ್ಸ್ ಗೆ ಸಂಬಂದಪಟ್ಟ ಖಾಲಿ ಜಾಗದಲ್ಲಿ ಜಯಾನಂದರ ಕುತ್ತಿಗೆಗೆ ಪ್ಲಾಸ್ಟಿಕ್ ಕೆಂಪು ದಾರದಿಂದ ಬಲವಾಗಿ ಬಿಗಿದು ಕೊಲೆ ಮಾಡಲಾಗಿತ್ತು. ಮೃತ ವ್ಯಕ್ತಿ ನವರಾತ್ರಿ ಸಮಯ ಹೆಣ್ಣು ಮಕ್ಕಳ ವೇಷ ಧರಿಸುತ್ತಿದ್ದವರಾಗಿದ್ದು, ವಿಪರಿತವಾದ ಆಮಲು ಪದಾರ್ಥ ಸೇವಿಸುವ ಚಟ ಹೊಂದಿದ್ದವರಾಗಿರುತ್ತಾರೆ. ಕಾವೂರು ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸಿದಾಗ ಕೊಲೆ ಕೃತ್ಯ ಬಯಲಾಗಿದೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ.