ನ್ಯೂಸ್ ನಾಟೌಟ್ : ಕೊಡಗು ವೀರ ಸೇನಾನಿಗಳ ತವರೂರು. ಇದೀಗ ಈ ಮುಕುಟಕ್ಕೆ ಮತ್ತೊಂದು ಯಶಸ್ಸಿನ ಗರಿಯನ್ನು ಮಹಿಳೆಯೊಬ್ಬರು ತೊಡಿಸಿದ್ದಾರೆ. ಹೌದು, ಭಾರತೀಯ ಭೂಸೇನೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಬಾರಿಕೆ ಲಿಶ್ಮಿತ ಇದೀಗ ಅತ್ಯುನ್ನತ ಮೇಜರ್ ಹುದ್ದೆಗೆ ಬಡ್ತಿ ಹೊಂದಿದ್ದಾರೆ. ಕೊಡಗಿಗೆ ಕೀರ್ತಿಯನ್ನು ತಂದಿದ್ದಾರೆ.
ಲಿಶ್ಮಿತ ಮೂಲತಃ ಭಾಗಮಂಡಲದ ತಾವೂರು ಗ್ರಾಮದ ನಿವಾಸಿ. ಪುಸ್ತುತ ಮಡಿಕೇರಿಯ ಕಾವೇರಿ ಬಡಾವಣೆಯಲ್ಲಿ ನೆಲೆಸಿರುವ ಬಾರಿಕೆ ಅಯ್ಯಪ್ಪ ಹಾಗೂ ರತ್ನಶೀಲ ಅವರ ಪುತ್ರಿ ಲಿಶ್ಮಿತ ಅವರು ಬೆಂಗಳೂರಿನ ಎಸ್ಎಂವಿಟಿ ತಾಂತ್ರಿಕ ಕಾಲೇಜಿನಲ್ಲಿ ಸಿವಿಲ್ ಇಂಜಿನಿಯರಿಂಗ್ ಪದವೀಧರೆಯಾಗಿದ್ದಾರೆ. ಪ್ರಾಥಮಿಕ ಶಿಕ್ಷಣವನ್ನು ಮಡಿಕೇರಿಯ ಸಂತ ಜೋಸೆಫರ ಶಾಲೆ ಮತ್ತು ಪದವಿ ಪೂರ್ವ ಶಿಕ್ಷಣವನ್ನು ಮಂಗಳೂರಿನ ಎಕ್ಸ್ಪರ್ಟ್ ಪ.ಪೂ.ಕಾಲೇಜಿನಲ್ಲಿ ಪೂರೈಸಿದ್ದಾರೆ. 2016ರಲ್ಲಿ ಬಾಂಬೆ ಇಂಜಿನಿಯರಿಂಗ್ ಗ್ರೂಪ್ ರೆಜಿಮೆಂಟ್ ಮೂಲಕ ಲೆಫ್ಟಿನೆಂಟ್ ಆಗಿ ಸೇವೆಗೆ ಸೇರ್ಪಡೆಗೊಂಡ ಲಿಶ್ಮಿತ ಒಟಿಎ ಚೆನ್ನೈನಲ್ಲಿ 11 ತಿಂಗಳು ತರಬೇತಿ ಪಡೆದು ನಂತರ ಕ್ಯಾಪ್ಟನ್ ಆಗಿ ಬಡ್ತಿ ಹೊಂದಿ ರಾಂಚಿಯಲ್ಲಿ ಕರ್ತವ್ಯ ನಿರ್ವಹಿಸಿ, ಬಳಿಕ ದೆಹಲಿಯಲ್ಲಿಸೇ ವೆ ಸಲ್ಲಿಸಿ ಇದೀಗ ಮೇಜರ್ ಆಗಿ ಬಡ್ತಿಹೊಂ ದಿ ದಿಮಾಪುರದಲ್ಲಿ ಕರ್ತವ್ಯದಲ್ಲಿದ್ದಾರೆ.