ನ್ಯೂಸ್ ನಾಟೌಟ್: ಭಕ್ತರ ಕಷ್ಟಗಳಿಗೆ ಓ.. ಎನ್ನುವ ಕೊರಗಜ್ಜ ಕಲಿಯುಗದಲ್ಲಿ ನಂಬಿದ ಭಕ್ತರ ಪಾಲಿನ ಆರಾಧ್ಯ ದೈವವಾಗಿದ್ದಾರೆ. ಕರಾವಳಿಯಲ್ಲಿ ಬಹುಪಾಲು ಜನ ನಂಬುತ್ತಿದ್ದ ಕೊರಗಜ್ಜನನ್ನು ಇದೀಗ ರಾಜ್ಯವ್ಯಾಪಿಯಾಗಿ ಜನರು ಜಾತಿ ಭೇದ ಮರೆತು ನಂಬುವುದಕ್ಕೆ, ಆರಾಧಿಸುವುದಕ್ಕೆ ಆರಂಭಿಸಿದ್ದಾರೆ.
ಕರಾವಳಿಯ ಒಂದೊಂದು ಕೊರಗಜ್ಜ ದೈವಸ್ಥಾನಕ್ಕೂ ಅದರದ್ದೇ ಆದ ಶಕ್ತಿಯಿದೆ. ಹೀಗೆ ಕಾರಣಿಕವಾಗಿರುವ ಕೊರಗಜ್ಜನ ದೈವಸ್ಥಾನಗಳಲ್ಲಿ ಸುಳ್ಯದ ನಾಲ್ಕೂರು ಗ್ರಾಮದ ಸ್ವಾಮಿ ಕೊರಗಜ್ಜ ದೈವ ಸಾನಿಧ್ಯವೂ ಒಂದಾಗಿದೆ. ಬೆಂಗಳೂರಿನ ಮಹಾಲಕ್ಷ್ಮಿ ಲೇಔಟ್ ನ ಬಾಲಕಿ ನಾಪತ್ತೆಯಾಗಿದ್ದಳು. ಈಕೆಯ ಪೋಷಕರು ಆತಂಕಗೊಂಡಿದ್ದರು. ಇಂತಹ ಸಮಯದಲ್ಲಿ ಸುಬ್ರಹ್ಮಣ್ಯ ಯುವತೇಜಸ್ಸು ಟ್ರಸ್ಟ್ ಇದರ ಕಾರ್ಯಕರ್ತರಾದ ನಿತಿನ್ ಭಟ್ ನೂಚಿಲ ಹಾಗೂ ಸುಹಾಸ್ ನೂಚಿಲ ಅವರ ಮನೆಯವರು ಉಜಿರಡ್ಕ ಸಾನಿಧ್ಯದಲ್ಲಿ ಬಂದು ಕೊರಗಜ್ಜನಿಗೆ ಪ್ರಾರ್ಥನೆ ಸಲ್ಲಿಸಿದ್ದರು. ಆ ದಿನ ಕಾಣೆಯಾದ ಬಾಲಕಿಯು ಸಂಜೆ ಸೂರ್ಯ ಅಸ್ತಮಿಸುವುದರೊಳಗೆ ಕೊರಗಜ್ಜನಿಗೆ ಹರಕೆಯ ರೂಪದಲ್ಲಿ ನರ್ತನ ಸೇವೆ ಕೊಡುವುದಾಗಿ ಪ್ರಾರ್ಥಿಸಿದ್ದರು ಅದರಂತೆ ಬಾಲಕಿ ಸೂರ್ಯಾಸ್ತಕ್ಕೂ ಮೊದಲೇ ಗೋವಾದಲ್ಲಿ ಪತ್ತೆಯಾಗಿದ್ದಳು. ಇದೀಗ ಬಾಲಕಿಯ ಜತೆಗೆ ಹೆತ್ತವರು ಬಂದು ಅಜ್ಜನಿಗೆ ಪೂಜೆ ಸಲ್ಲಿಸಿದ್ದಾರೆ.