ನ್ಯೂಸ್ ನಾಟೌಟ್: ಜಾರ್ಖಂಡ್ ಮೂಲದ ಯುವತಿಯೊಬ್ಬರು ಪೋಷಕರು ನೀಡಿದ ಪಾಕೆಟ್ ಮನಿ ಸಂಗ್ರಹಿಸಿಟ್ಟುಕೊಂಡು ಶಾಲೆಯಲ್ಲಿ ಶೌಚಾಲಯ ನಿರ್ಮಿಸಲು ನೆರವು ನೀಡುವ ಮೂಲಕ ಗಮನ ಸೆಳೆದಿದ್ದಾರೆ.
ನಾನು ಪ್ರಧಾನಿ ನರೇಂದ್ರ ಮೋದಿಯವರು ಘೋಷಿಸಿದ ಸ್ವಚ್ಛ ಭಾರತ್ ಅಭಿಯಾನದಿಂದ ಪ್ರೇರಿತಳಾಗಿದ್ದೇನೆ. ಶೌಚಾಲಯ ಸಮಸ್ಯೆಯಿಂದಾಗಿ ಹೆಣ್ಣುಮಕ್ಕಳು ಶಿಕ್ಷಣ ತ್ಯಜಿಸುವುದನ್ನು ನಾನು ಅರಿತಿದ್ದೇನೆ. ಅದಕ್ಕಾಗಿ 2014ರಿಂದ ಪಾಕೆಟ್ ಮನಿ ಉಳಿಸಲು ಪ್ರಾರಂಭಿಸಿದೆ ಎಂದು ಮಾಂಡ್ರಿಟಾ ಚಟರ್ಜಿ ತಿಳಿಸಿದ್ದಾರೆ.
ಇದುವರೆಗೆ ₹24 ಸಾವಿರ ಪಾಕೆಟ್ ಮನಿ ಉಳಿತಾಯ ಮಾಡಿದ್ದೇನೆ. ಶೌಚಾಲಯ ನಿರ್ಮಾಣಕ್ಕಾಗಿ ಸರ್ಕಾರ ₹12 ಸಾವಿರ ಸಹಾಯಧನ ನೀಡುವ ಯೋಜನೆ ಬಗ್ಗೆ ತಿಳಿದುಕೊಂಡಿದ್ದೇನೆ. ಅದರಂತೆ ತೆಲಂಗಾಣದ ಒಂದು ಹಳ್ಳಿಯಲ್ಲಿ 2 ಶೌಚಾಲಯಗಳನ್ನು ನಿರ್ಮಿಸಲು ವೈಯಕ್ತಿಕವಾಗಿ ಸಹಾಯ ಮಾಡಿದ್ದೇನೆ’ ಎಂದು ಮಾಂಡ್ರಿಟಾ ಹೇಳಿಕೊಂಡಿದ್ದಾರೆ.
ಸದ್ಯ, ನಿರುಪಯುಕ್ತ ಪ್ಲಾಸ್ಟಿಕ್ ಬಾಟಲಿಗಳನ್ನು ಬಳಸಿ ಪರಿಸರ ಸ್ನೇಹಿ ಶೌಚಾಲಯ ನಿರ್ಮಿಸಲು ಸಹಾಯ ಮಾಡುತ್ತಿದ್ದೇನೆ ಎಂದು ಚಟರ್ಜಿ ತಿಳಿಸಿದ್ದಾರೆ.