ನ್ಯೂಸ್ ನಾಟೌಟ್ : ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ಮೇಜರ್ ಸಂದೀಪ್ ಉನ್ನಿಕೃಷ್ಣನ್ ವೃತ್ತದಲ್ಲಿ ಹಸಿರು ಬಟ್ಟೆ ಮುಚ್ಚಿದ ವಿಚಾರ ಭಾರಿ ವಿವಾದಕ್ಕೆ ತಿರುಗಿದ ಘಟನೆ ನಡೆದಿದೆ.
ಈಶ್ವರಮಂಗಲ ದ ಹೃದಯ ಭಾಗದಲ್ಲಿ ಮೇಜರ್ ಸಂದೀಪ್ ಉನ್ನಿಕೃಷ್ಣನ್ ವೃತ್ತವಿದೆ. ದೇಶಕ್ಕಾಗಿ ಮಡಿದ ವೀರ ಯೋಧನ ನೆನಪಿಗಾಗಿ ವೃತ್ತ ನಿರ್ಮಿಸಲಾಗಿತ್ತು. ಆದರೆ ಈ ವೃತ್ತದಲ್ಲಿ ಕೆಲವರು ಸಂದೀಪ್ ಹೆಸರೇ ಕಾಣದಂತೆ ಹಸಿರು ಬಟ್ಟೆ ಮುಚ್ಚಿದ್ದು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಖಂಡನೆ ವ್ಯಕ್ತವಾಯಿತು.
ಇದು ಸೈನ್ಯಕ್ಕೆ ಮತ್ತು ಸಂದೀಪ್ ಉನ್ನಿಕೃಷ್ಣನ್ ಅವರಿಗೆ ಮಾಡಿರುವ ಅಪಮಾನ ಎಂದು ಸಾರ್ವಜನಿಕ ವಲಯದಲ್ಲಿ ಹಾಗೂ ಸಾಮಾಜಿಕ ಜಾಲತಾಣದಲ್ಲಿ ಸುದ್ದಿ ವೈರಲ್ ಆಗಿದೆ. ಈ ಬೆನ್ನಲ್ಲೇ ಹಸಿರು ಬಟ್ಟೆಯನ್ನು ತೆರವು ಗೊಳಿಸಲಾಗಿದೆ ಎಂದು ತಿಳಿದುಬಂದಿದೆ.