ನ್ಯೂಸ್ ನಾಟೌಟ್: ಇತ್ತೀಚಿನ ದಿನಗಳಲ್ಲಿ ಅತಿಯಾದ ವೇಗದ ಚಾಲನೆಯಿಂದ ದೇಶಾದ್ಯಂತ ಭಾರಿ ಅನಾಹುತಗಳು ಸಂಭವಿಸುತ್ತಿವೆ. ಕೆಲವರ ಅಜಾಗರೂಕತೆಯಿಂದ ಅಮಾಯಕ ಜೀವಗಳು ರಸ್ತೆಯಲ್ಲಿ ಬಲಿಯಾಗುತ್ತಿವೆ. ಇಂತಹ ಹಲವು ಸನ್ನಿವೇಶಗಳು ನಮ್ಮ ಎದುರಿಗೆ ಇರುವಾಗಲೇ ಇದೀಗ ಇದಕ್ಕೆ ಮತ್ತೊಂದು ಹೊಸ ಸೇರ್ಪಡೆಯಾಗಿದೆ.
ಹೌದು, ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನ ಉಳ್ಳಾಲದಲ್ಲಿ ಹಿಟ್ & ರನ್ ಪ್ರಕರಣವೊಂದು ದಾಖಲಾಗಿದೆ. ಸಾಮಾನ್ಯವಾಗಿ ಅಮಾಯಕ ಜನರಿಗೆ ಗುದ್ದಿ ಹೋಗುವುದನ್ನು ನೋಡಿದ್ದೇವೆ. ಆದರೆ ಇದೀಗ ಗಸ್ತಿನಲ್ಲಿದ್ದ ಪೊಲೀಸ್ ಟ್ರಾಫಿಕ್ ಸಿಬ್ಬಂದಿಗೇ ಕಾರು ಡಿಕ್ಕಿ ಹೊಡೆದು ಪರಾರಿಯಾಗಿದೆ. ಸದ್ಯ ಗಾಯಾಳು ಹೆಡ್ ಕಾನ್ಸ್ಟೇಬಲ್ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದು ಬಂದಿದೆ.