ನ್ಯೂಸ್ ನಾಟೌಟ್ : ಕೋಟ್ಯಂತರ ಮಂದಿಯ ದಾಹ ಹಿಂಗಿಸುವ ಲಕ್ಷಾಂತರ ಮಂದಿಯ ಬದುಕಿಗೆ ಆಧಾರವಾಗಿರುವ ಕಾವೇರಿ ನದಿಯ ತೀರ್ಥೋದ್ಭವಕ್ಕೆ ಕ್ಷಣಗಣನೆ ಆರಂಭವಾಗಿದೆ. ಇಲ್ಲಿನ ಭಾಗಮಂಡಲದ ಸಮೀಪದ ತಲಕಾವೇರಿಯಲ್ಲಿ ಭರದ ಸಿದ್ಧತೆಗಳು ಸೋಮವಾರ ನಡೆದಿದ್ದು, ಸಹಸ್ರಾರು ಮಂದಿ ಆಗಮಿಸುವ ನಿರೀಕ್ಷೆ ಇದೆ.
‘ಶ್ರೀ ಕಾವೇರಿ ತುಲಾ ಸಂಕ್ರಮಣ ಪವಿತ್ರ ತೀರ್ಥೋಧ್ಬವ’ ಎಂದೇ ಕರೆಯಲಾಗುವ ಈ ಧಾರ್ಮಿಕ ವಿದ್ಯಮಾನವು ಸೋಮವಾರ ಸಂಜೆ 7.21ಕ್ಕೆ ಮೇಷ ಲಗ್ನದಲ್ಲಿ ನಡೆಯಲಿದೆ. ಜಿಲ್ಲಾಡಳಿತ ಈಗಾಗಲೇ ತನ್ನ ಸಿದ್ಧತೆಗಳನ್ನು ಪೂರ್ಣಗೊಳಿಸಿದೆ. ತಲಕಾವೇರಿಯಲ್ಲಿರುವ ಅಗಸ್ತ್ಯೇಶ್ವರ, ಮಹಾಗಣಪತಿ ದೇಗುಲಗಳು ಹೂಗಳಿಂದ ಸಿಂಗಾರಗೊಂಡಿವೆ. ಕಬ್ಬಿಣದ ಬ್ಯಾರಿಕೇಡ್ಗಳನ್ನು ಹಾಕಿ ಭಕ್ತ ರನ್ನು ನಿಯಂತ್ರಿಸಲು ಪೊಲೀಸರೂ ಸನ್ನದ್ಧರಾಗಿದ್ದಾರೆ. ವಿವಿಧ ಬಗೆಯ ಧಾರ್ಮಿಕ ವಿಧಿವಿಧಾನಗಳು ಆರಂಭಗೊಂಡಿವೆ.