ನ್ಯೂಸ್ ನಾಟೌಟ್ : ಕುಂದಾಪುರ ಮೂಲದ ವೃದ್ಧ ಬಿಕ್ಷುಕಿಯೊಬ್ಬರು ಬೇಡಿ ಸಂಗ್ರಹಿಸಿದ ಹಣವನ್ನು ಬಪ್ಪನಾಡು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನಕ್ಕೆ ಭೇಟಿ ನೀಡಿ ಮದ್ಯಾಹ್ನದ ಅನ್ನದಾನಕ್ಕಾಗಿ ಸಮರ್ಪಿಸಿದ್ದಾರೆ. ಅಶ್ವದಮ್ಮ ಎಂಬವರು ಸೋಮವಾರ ದೇಗುಲಕ್ಕೆ 1 ಲಕ್ಷ ರೂ. ಹಣವನ್ನು ಸಂಗ್ರಹಿಸಿ ನೀಡಿದ್ದಾರೆ. ಮೂಲತಃ ಉಡುಪಿಯ ಕುಂದಾಪುರದ ವಯೋವೃದ್ಧೆಯಾಗಿರುವ ಅಶ್ವದಮ್ಮ ಅವರು ಅಯ್ಯಪ್ಪ ಸ್ವಾಮೀಯ ದೊಡ್ಡ ಭಕ್ತೆಯಾಗಿದ್ದಾರೆ.
ಪ್ರತಿ ನಿತ್ಯ ವಿವಿಧ ದೇವಸ್ಥಾನಗಳಲ್ಲಿ ಬೇರಿ ನಿಧಿ ಸಂಗ್ರಹಿಸಿ ಅದನ್ನು ತಾನು ವಿವಿಧ ದೇವಾಲಯಗಳ ಅನ್ನದಾನ ನಿಧಿಗೆ ಸಮರ್ಪಿಸುತ್ತಾರೆ. ಈಗಾಗಲೇ ಅವರು ಹಲವಾರು ದೇವಾಲಯಗಳಿಗೆ ದೇಣಿಗೆಯನ್ನು ನೀಡಿದ್ದಾರೆ. ವೃದ್ಧೆ ತನ್ನ ಜೀವನದಲ್ಲಿ ಇಂತಹ ಸಮಾಜ ಕಾರ್ಯ ಮಾಡುತ್ತಿರುವುದಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.