ನ್ಯೂಸ್ ನಾಟೌಟ್ : ಮುಂದಿನ ವರ್ಷ ಭಾರತೀಯ ವಾಯುಪಡೆಗೆ (ಐಎಎಫ್) ಮಹಿಳಾ ಅಗ್ನಿವೀರರನ್ನು ನೇಮಕಗೊಳಿಸಲಾಗುವುದು ಎಂದು ಐಎಎಫ್ ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ವಿವೇಕ್ ರಾಮ್ ಚೌಧರಿ ಶನಿವಾರ ಘೋಷಿಸಿದ್ದಾರೆ.
ಭಾರತೀಯ ವಾಯುಪಡೆಯ 90ನೇ ಸಂಸ್ಥಾಪನಾ ದಿನಾಚರಣೆಯ ಪ್ರಯುಕ್ತ ಚಂಡೀಗಢದಲ್ಲಿ ನಡೆದ ಕಾರ್ಯಕ್ರಮದಲ್ಲಿ ಚೌಧರಿ, ಈ ಮಹತ್ತರ ಘೋಷಣೆ ಮಾಡಿದರು. ಈ ಐತಿಹಾಸಿಕ ಕ್ಷಣದಲ್ಲಿ ಭಾರತೀಯ ವಾಯುಪಡೆಯ ಅಧಿಕಾರಿಗಳಿಗಾಗಿ ‘ವೆಪನ್ ಸಿಸ್ಟಂ ಬ್ರಾಂಚ್’ ತೆರೆಯಲು ಸರ್ಕಾರವು ಅನುಮೋದನೆ ನೀಡಿದೆ ಎಂದು ಹೇಳಿದರು. ಆ ಮೂಲಕ ಫ್ಲೈಯಿಂಗ್ ತರಬೇತಿಯಲ್ಲಿ ವೆಚ್ಚದಲ್ಲಿ ಗಣನೀಯ ಕಡಿತ ಉಂಟಾಗಲಿದ್ದು, ₹3,400 ಕೋಟಿ ಉಳಿತಾಯವಾಗಲಿದೆ ಎಂದು ತಿಳಿಸಿದರು. ಸ್ವಾತಂತ್ರ್ಯದ ನಂತರ ಇದೇ ಮೊದಲ ಬಾರಿಗೆ ವಾಯುಪಡೆಯಲ್ಲಿ ಹೊಸ ಕಾರ್ಯಾಚರಣೆಯ ಶಾಖೆ ತೆರೆಯಲಾಗುತ್ತಿದೆ ಎಂದು ಸಹ ಚೌಧರಿ ತಿಳಿಸಿದರು.