ನ್ಯೂಸ್ ನಾಟೌಟ್ : ಗೆಳೆಯ ಅಂತ ನಂಬಿ ಸ್ವಸಹಾಯ ಸಂಘದಿಂದ ಸಾಲ ತೆಗೆಸಿಕೊಟ್ರೆ ಹೃದಯವಂತ ಗೆಳೆಯನಿಗೆ ಮೋಸ ಮಾಡಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ನೆರಿಯದಿಂದ ವರದಿಯಾಗಿದೆ. ಸಾಲಗಾರರ ನಿತ್ಯ ಕಿರುಕುಳದಿಂದ ಸಾಲ ಕೂಡಿಸಿದ ಯುವಕ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.
ಬೆಳ್ತಂಗಡಿ ತಾಲ್ಲೂಕಿನ ನೆರಿಯದಲ್ಲಿ ಗ್ರಾಮದ ಚಂದ್ರಶೇಖರ್ (24) ಮೃತ ಯುವಕ. ಗಾರೆ ಮತ್ತು ವಯರಿಂಗ್ ಕೆಲಸ ಮಾಡುತ್ತಿದ್ದ ಈತ ತನ್ನ ಗೆಳೆಯರ ಜೊತೆ ಸೇರಿ ಶಬರಿ ಎನ್ನುವ ಸ್ವಸಹಾಯ ಸಂಘ ಮಾಡಿಕೊಂಡಿದ್ದರು. ಈ ಸಂಘದ ಮುಖೇನ ಉಜಿರೆಯ ಖಾಸಗಿ ಖಾಸಗಿ ಬ್ಯಾಂಕಿನಿಂದ 4ಲಕ್ಷ ರೂ ಸಾಲ ಪಡೆದುಕೊಂಡಿದ್ದರು. ಈ ಹಣವನ್ನು ಎಂಟು ಜನ ಹಂಚಿಕೊಂಡಿದ್ದು ಚಂದ್ರಶೇಖರ್ ಹಣವನ್ನು ತನಗೆ ಅನಿವಾರ್ಯ ಇತ್ತೆಂದು ಯೋಗೀಶ್ ಎಂಬಾತ ಪಡೆದುಕೊಂಡಿದ್ದ ಎನ್ನಲಾಗಿದೆ. ಆದರೆ ಸಾಲ ಪಡೆದವ ಸಾಲ ಕಟ್ಟದ ಹಿನ್ನೆಲೆ ಬ್ಯಾಂಕ್ ಸಿಬ್ಬಂದಿ ಪದೇ ಪದೇ ಚಂದ್ರಶೇಖರ್ ಎಂಬವರಿಗೆ ಕರೆ ಮಾಡುತ್ತಿದ್ದರು. ಇದರಿಂದ ಬೇಸತ್ತ ಚಂದ್ರಶೇಖರ್ ಕಳೆದ ವಾರ ಆತ್ಮಹತ್ಯೆಗೆ ಶರಣಾಗಿದ್ದ. ಸದ್ಯ ಪ್ರಕರಣಕ್ಕೆ ಸಂಬಂಧಪಟ್ಟಂತೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.