ನ್ಯೂಸ್ ನಾಟೌಟ್: ಮುಂಬರುವ ಟಿ೨೦ ವಿಶ್ವಕಪ್ಗಾಗಿ ಟೀಮ್ ಇಂಡಿಯಾ ಸಜ್ಜಾಗುತ್ತಿದೆ. ಈ ನಡುವೆ ಭಾರತ ತಂಡಕ್ಕೆ ಬಿಸಿಸಿಐ (ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ) ಭಾನುವಾರ ಹೊಸ ಜೆರ್ಸಿಯನ್ನು ಅನಾವರಣಗೊಳಿಸಿದೆ. ಇದರೊಂದಿಗೆ ಮುಂಬರುವ ಟಿ೨೦ ವಿಶ್ವಕಪ್ನಲ್ಲಿ ಟೀಮ್ ಇಂಡಿಯಾ ಆಟಗಾರರು ಹೊಸ ಲುಕ್ನಿಂದ ಕಣಕ್ಕಿಳಿಯಲಿದ್ದಾರೆ.
ಕಿಟ್ ಪ್ರಾಯೋಜಕತ್ವ ಹೊಂದಿರುವ ಎಂಪಿಎಲ್ ಸ್ಪೋರ್ಟ್ ಸಹಯೋಗದಲ್ಲಿ ಬಿಸಿಸಿಐ, ಭಾರತ ಪುರುಷ ಹಾಗೂ ಮಹಿಳಾ ಕ್ರಿಕೆಟ್ ತಂಡದ ಜೆರ್ಸಿ ಅನಾವರಣಗೊಳಿಸಿದೆ. ಇದಕ್ಕೆ ‘ಒನ್ ಬ್ಲೂ ಜೆರ್ಸಿ’ ಎಂದು ಹೆಸರಿಸಲಾಗಿದೆ. ಇದು ನೀಲಿ ಹಾಗೂ ಕಡುನೀಲಿ ಬಣ್ಣದ ಮಿಶ್ರಣವನ್ನು ಹೊಂದಿದೆ. ಐಸಿಸಿ ಟಿ೨೦ ವಿಶ್ವಕಪ್ಗೆ ಆಸ್ಟ್ರೇಲಿಯಾಗೆ ಆತಿಥ್ಯ ವಹಿಸುತ್ತಿದ್ದು, ಅಕ್ಟೋಬರ್ ೧೬ರಿಂದ ನವೆಂಬರ್ ೧೩ರ ವರೆಗೆ ಸಾಗಲಿದೆ. ಇದಕ್ಕೂ ಮೊದಲು ಭಾರತ ತಂಡವು ತವರಿನಲ್ಲಿ ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧ ಟಿ೨೦ ಸರಣಿಯಲ್ಲಿ ಶಕ್ತಿ ಪ್ರದರ್ಶನ ನಡೆಸಲಿದೆ.