ನ್ಯೂಸ್ ನಾಟೌಟ್ : ರಾಜ್ಯದಲ್ಲಿ ಮೊದಲ ಬಾರಿಗೆ ಬಿಜೆಪಿ ಪ್ರಯೋಗಿಸಿದ್ದ ಧರ್ಮಕ್ಕೆ ಇದೀಗ ಸಾಕಾರಗೊಂಡಿದೆ.
ಗೋಹತ್ಯೆ ನಿಷೇಧ ಬಳಿಕ ಮತಾಂತರ ನಿಷೇಧ ಮಸೂದೆಗೆ ಹಿಡಿದ್ದ 9 ತಿಂಗಳ ಗ್ರಹಣ ಬಿಡುಗಡೆ ಆಗಿದೆ. ವಿಪಕ್ಷ ಕಾಂಗ್ರೆಸ್ ಜೆಡಿಎಸ್ ಸದಸ್ಯರ ತೀವ್ರ ವಿರೋಧ, ಗದ್ದಲ, ಧಿಕ್ಕಾರ ಸಭಾತ್ಯಾಗದ ನಡುವೆಯೇ ಮತಾಂತರ ನಿಷೇಧ ಮಸೂದೆ ಪಾಸ್ ಆಗಿದೆ. ಕರ್ನಾಟಕ ಧಾರ್ಮಿಕ ಸ್ವಾತಂತ್ರ್ಯ ಹಕ್ಕು ಸಂರಕ್ಷಣ ಮಸೂದೆಯನ್ನ ಪರಿಷತ್ತಿನಲ್ಲಿ ಧ್ವನಿಮತದ ಮೂಲಕ ಅಂಗೀಕಾರಗೊಂಡಿದೆ.
ಮತಾಂತರ ನಿಷೇಧ ವಿಧೇಯಕ ಅಂಗೀಕಾರವಾದ ಈ ದಿನ ವಿಧಾನ ಪರಿಷತ್ ಇತಿಹಾಸದ ಕರಾಳ ದಿನ ಆಂತ ಪರಿಷತ್ ವಿಪಕ್ಷ ನಾಯಕ ಬಿ.ಕೆ. ಹರಿಪ್ರಸಾದ್ ಹೇಳಿದ್ದಾರೆ. ಸಂಖ್ಯಾಬಲದ ಮೇಲೆ ಸಂವಿಧಾನದ ಆಶಯಗಳು ಗಾಳಿಗೆ ತೂರಲಾಗಿದೆ ಅಂತ ಕಿಡಿಕಾರಿದ್ದಾರೆ. ಇದೊಂದು ಪೊಲಿಟಿಕಲ್ ಆಜೆಂಡಾ ಅಂತ ಪರಿಷತ್ ಕಾಂಗ್ರೆಸ್ ಸದಸ್ಯ ಸಲೀಂ ಅಹಮ್ಮದ್ ಆರೋಪಿಸಿದ್ದಾರೆ. ಒಂದು ಹಂತದಲ್ಲಿ ಸಿಎಂ ಜೊತೆಗೆ ವಾಗ್ಯುದ್ಧ ಏರ್ಪಟ್ಟಿತು. ಇನ್ನು ಮತಾಂತರ ನಿಷೇಧ ವಿಧೇಯಕದ ಹಿಂದೆ ಯಾವುದೇ ಹಿಡನ್ ಅಜೆಂಡಾ ಇಲ್ಲ ಅಂತ ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ. ಕೊನೆಗೆ ಹಂಗಾಮಿ ಸಭಾಪತಿ ರಘುನಾಥ ರಾವ್ ಮಲ್ಕಾಪುರೆ, ಮಸೂದೆಯನ್ನು ಧ್ವನಿಮತಕ್ಕೆ ಹಾಕಿದ್ರು ಸಭಾಪತಿಯ ನಡೆಗೆ ತೀವ್ರ ವಿರೋಧ ವ್ಯಕ್ತಪಡಿಸಿದ ಕಾಂಗ್ರೆಸ್ ಸದಸ್ಯರು, ಧಿಕ್ಕಾರ ಕೂಗಿ ಮಸೂದೆಯ ಪ್ರತಿಗಳನ್ನು ಹರಿದು ಹಾಕಿ ಬಳಿಕ ಸಭಾತ್ಯಾಗ ಮಾಡಿದ್ರು. ಜೆಡಿಎಸ್ ಸದಸ್ಯರು ಕೂಡಾ ಕಾಂಗ್ರೆಸ್ ಸದಸ್ಯರನ್ನ ಹಿಂಬಾಲಿಸಿದ್ರು. ಕೊನೆಗೆ ಸದ್ದು ಗದ್ದಲದ ಮಧ್ಯೆ ಧ್ವನಿಮತದ ಮೂಲಕ ಮಸೂದೆಗೆ ಮೇಲ್ಮನೆ ಒಪ್ಪಿಗೆ ಸೂಚಿಸಿತು.