ನ್ಯೂಸ್ ನಾಟೌಟ್ : ಹೆಣ್ಣು, ಹೊನ್ನು, ಮಣ್ಣಿಗಾಗಿ ಈ ಭೂಮಿಯಲ್ಲಿ ಏನು ಬೇಕಾದರೂ ನಡೆಯಬಹುದು. ನಾಲ್ಕು ದಿನದ ಜೀವನ ಸಂತೆಯಲ್ಲಿ ಖುಷಿಯಾಗಿರುವುದನ್ನು ಬಿಟ್ಟು ಇಲ್ಲೊಂದು ಕುಟುಂಬ ಆಸ್ತಿಗಾಗಿ ಪರಸ್ಪರ ಹೊಡೆದಾಡಿಕೊಂಡು ಆಸ್ಪತ್ರೆ ಸೇರಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಬೆಳ್ಳಾರೆಯಿಂದ ವರದಿಯಾಗಿದೆ.
ಎಡಮಂಗಲ ಗ್ರಾಮದ ಗಂಡಿತ್ತಡ್ಕ ನಿವಾಸಿಗಳಾದ ಶೂದ್ರಪ್ಪ ನಾಯ್ಕ, ನಾಗೇಶ, ರೇವತಿ ಅವರು ಕಡಬ ಆಸ್ಪತ್ರೆಗೆ ದಾಖಲಾಗಿದ್ದಾರೆ. ಇವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಪುತ್ತೂರು ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಬೆಳ್ಳಾರೆ ಠಾಣೆಗೆ ನಾಗೇಶ್ ಎಂಬವರು ದೂರು ನೀಡಿದ್ದಾರೆ. ನನಗೂ ಮತ್ತು ಆರೋಪಿತ ಸುಂದರ ನಾಯ್ಕರವರಿಗೂ ಜಾಗದ ವಿಚಾರದಲ್ಲಿ ತಕರಾರು ಇದೆ. ಗಂಡಿತ್ತಡ್ಕ ಎಂಬಲ್ಲಿ ತನ್ನ ದೊಡ್ಡಪ್ಪ ಶೂದ್ರಪ್ಪ ನಾಯ್ಕ ರವರಿಗೆ ಸೇರಿದ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಆರೋಪಿತರಾದ ಸುಂದರ ನಾಯ್ಕ ಮತ್ತು ಆತನ ಹೆಂಡತಿ ಇತರರು ಜಾಗಕ್ಕೆ ಅಕ್ರಮ ಪ್ರವೇಶ ಮಾಡಿದ್ದಾರೆ. ಬಳಿಕ ಕೊಡಲಿಯಿಂದ ನಿಮ್ಮನ್ನು ಕೊಲ್ಲದೇ ಬಿಡುವುದಿಲ್ಲ ಎಂದು ಹೇಳಿ ತನ್ನ ಪತ್ನಿ ರೇವತಿ ಮತ್ತು ದೊಡ್ಡಪ್ಪ ಉದ್ರಪ್ಪ ನಾಯ್ಕ ರವರ ತಲೆಗೆ ಕಡಿದು ಗಾಯಗೊಳಿಸಿರುವುದಾಗಿ ದೂರಿನಲ್ಲಿ ಆರೋಪಿಸಿದ್ದಾರೆ. ಈ ಬಗ್ಗೆ ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.