ನ್ಯೂಸ್ ನಾಟೌಟ್: ಬೆಳ್ಳಾರೆಯಲ್ಲಿ ನಡೆದಿದ್ದ ಬಿಜೆಪಿ ಯುವ ಮೋರ್ಚಾ ಮುಖಂಡನ ಪ್ರವೀಣ್ ನೆಟ್ಟಾರ್ ಹತ್ಯೆ ಪ್ರಕರಣದ ತನಿಖೆಗೆ ಇಳಿದಿರುವ ರಾಷ್ಟ್ರೀಯ ತನಿಖಾ ದಳ ಇದೀಗ 32 ಕಡೆ ದಾಳಿ ನಡೆಸಿದೆ. ಅಧಿಕಾರಿಗಳು ಸೆ.6ರಂದು ಬೆಳ್ಳಂಬೆಳಗ್ಗೆ ಪುತ್ತೂರು, ಉಪ್ಪಿನಂಗಡಿ, ಕಬಕ ಮತ್ತು ಸುಳ್ಯದಲ್ಲಿ ದಾಳಿ ನಡೆಸಿದ್ದಾರೆ.
ಸುಮಾರು ನೂರಕ್ಕೂ ಅಧಿಕ ವಾಹನಗಳಲ್ಲಿ ತನಿಖಾ ದಳದ ಅಧಿಕಾರಿಗಳು ಗುಪ್ತವಾಗಿ ಆಗಮಿಸಿದ್ದಾರೆ. ವಿವಿಧೆಡೆ ಶಂಕಿತರಿಗೆ ಬಲೆ ಬೀಸಿದ್ದಾರೆ. ಈಗಾಗಲೇ ಪ್ರವೀಣ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಹತ್ತು ಮಂದಿಯನ್ನು ಬಂಧಿಸಿದ್ದು ನ್ಯಾಯಾಂಗ ಬಂಧನದಲ್ಲಿದ್ದಾರೆ. ಕರ್ನಾಟಕ ಪೊಲೀಸ್ ಇಲಾಖೆ ಇದೀಗ ರಾಷ್ಟ್ರೀಯ ತನಿಖಾ ದಳಕ್ಕೆ ಸಾಥ್ ನೀಡುತ್ತಿದೆ. ಇದೀಗ ಕೊಲೆಗೆ ಸಹಕರಿಸಿದವರನ್ನು ಪುತ್ತೂರಿನ ದರ್ಬೆ ನಿರೀಕ್ಷಣಾ ಮಂದಿರಕ್ಕೆ ಕರೆತಂದು ವಿಚಾರಣೆ ನಡೆಸುತ್ತಿದ್ದಾರೆ.ಸದ್ಯ ಸ್ಥಳಕ್ಕೆ ಪ್ರವೇಶಿಸಲು ಮಾಧ್ಯಮದವರನ್ನು ನಿರ್ಬಂಧಿಸಲಾಗಿದೆ.