ನ್ಯೂಸ್ ನಾಟೌಟ್ : ದೇಶಾದ್ಯಂತ ಹಲವು ರಾಜ್ಯಗಳಲ್ಲಿ ಇಂದು (ಸೆ.೧೭) ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಹುಟ್ಟು ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಗುತ್ತಿದೆ. ಅಭಿಮಾನಿಗಳು, ಪಕ್ಷದ ಕಾರ್ಯಕರ್ತರು ಮೋದಿ ಮೇಲಿನ ಪ್ರೀತಿ-ಅಭಿಮಾನಕ್ಕೆ ಹಲವಾರು ಸಾಮಾಜಿಕ ಕಾರ್ಯಗಳ ಮೂಲಕವೂ ಹುಟ್ಟು ಹಬ್ಬಕ್ಕೆ ವಿಶೇಷ ಮೆರುಗು ನೀಡಿದ್ದಾರೆ.
ಈ ದಿನದ ವಿಶೇಷ ಹಲವರಿಗೆ ಅಚ್ಚರಿ ತರುವುದರಲ್ಲಿ ಅನುಮಾನವಿಲ್ಲ. ಏಕೆಂದರೆ ಇಂದು ಇತ್ತೀಚೆಗೆ ದುಷ್ಕರ್ಮಿಗಳ ಅಟ್ಟಹಾಸಕ್ಕೆ ಬಲಿಯಾದ ಪ್ರವೀಣ್ ನೆಟ್ಟಾರ್ ಅವರ ಹುಟ್ಟು ಹಬ್ಬದ ದಿನವಾಗಿದೆ. ಹೀಗಾಗಿ ಕರಾವಳಿಯಾದ್ಯಂತ ವಿವಿಧ ಕಡೆ ಹಿಂದೂ ಸಂಘಟನೆಯ ಕಾರ್ಯಕರ್ತರು ದಿವಂಗತ ಪ್ರವೀಣ್ ನಟ್ಟಾರ್ ಅವರ ಹುಟ್ಟುಹಬ್ಬವನ್ನು ಆಚರಿಸಿದ್ದಾರೆ. ಜಾಲತಾಣದಲ್ಲಿ ಪ್ರವೀಣ್ ಹುಟ್ಟು ಹಬ್ಬಕ್ಕೆ ಹಾರೈಸಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿರುವ ಶಾಸಕ ವೇದವ್ಯಾಸ್ ಕಾಮತ್ , ಒಬ್ಬರು ದೇಶಕ್ಕಾಗಿ ತನ್ನ ಜೀವನವನ್ನು ಸಮರ್ಪಿಸಿಕೊಂಡ ಪ್ರಧಾನ ಸೇವಕ, ಮತ್ತೊಬ್ಬ ತನ್ನ ಸಿದ್ಧಾಂತಕ್ಕಾಗಿ ಬಲಿದಾನಗೈದ ಹುತಾತ್ಮ. ಇಬ್ಬರಿಗೂ ಜನ್ಮ ದಿನದ ಶುಭಾಶಯಗಳು’ ಎಂದು ತಿಳಿಸಿದ್ದಾರೆ.
ಬಿಜೆಪಿ ಯುವ ಮೋರ್ಚಾ ನಾಯಕ ಪ್ರವೀಣ್ ನೆಟ್ಟಾರ್ ಇತ್ತೀಚೆಗೆ ಬೆಳ್ಳಾರೆಯಲ್ಲಿ ತಮ್ಮ ಅಂಗಡಿ ಅಕ್ಷಯ್ ಚಿಕನ್ ಸೆಂಟರ್ ಎದುರು ಭೀಕರವಾಗಿ ಕೊಲೆಗೀಡಾಗಿದ್ದರು. ಇವರ ಹತ್ಯೆ ಬಳಿಕ ಕರಾವಳಿ ನಿಗಿನಿಗಿ ಕೆಂಡದಂತಾಗಿತ್ತು. ಆರೋಪಿಗಳ ಬಂಧನಕ್ಕೆ ಕೆಲವು ದಿನಗಳೇ ಬೇಕಾಯಿತು. ಇದೀಗ ಎನ್ ಐಎ (ರಾಷ್ಟ್ರೀಯ ತನಿಖಾ ದಳ) ಪ್ರಕರಣದ ತನಿಖೆಯನ್ನು ಕೈಗೆತ್ತಿಕೊಂಡಿದೆ.