ನ್ಯೂಸ್ ನಾಟೌಟ್ : ಒಂದೇ ದಿನ ಅತಿ ಹೆಚ್ಚು ಪಬ್ಗಳಲ್ಲಿ ಕುಡಿದಿರುವ ದಾಖಲೆಯನ್ನು ಮುರಿಯುವ ಉದ್ದೇಶದಿಂದ ಬ್ರಿಟನ್ನ ಒಬ್ಬ ವ್ಯಕ್ತಿ ಕೇವಲ 17 ಗಂಟೆಗಳಲ್ಲಿ 67 ಪಬ್ಗಳಿಗೆ ಭೇಟಿ ನೀಡಿ ಕಂಠಪೂರ್ತಿ ಕುಡಿದಿದ್ದಾನೆ.
ಇದಕ್ಕೂ ಮೊದಲು ಯುನೈಟೆಡ್ ಕಿಂಗ್ಡಮ್ನ ಕಾರ್ಡಿಫ್ನ ವ್ಯಕ್ತಿಯೊಬ್ಬರು 17 ಗಂಟೆಗಳಲ್ಲಿ 56 ಪಬ್ಗಳಲ್ಲಿ ಮದ್ಯ ಸೇವಿಸಿದ್ದರು. ಗಿನ್ನೆಸ್ ದಾಖಲೆ ಮುರಿಯುವುದಾಗಿ ಸ್ನೇಹಿತರೊಂದಿಗೆ ಪಂದ್ಯ ಕಟ್ಟಿ ಕುಡಿಯಲು ಹೊರಟ ವ್ಯಕ್ತಿ ಹೊಸ ದಾಖಲೆ ನಿರ್ಮಾಣ ಮಾಡಿದ್ದಾನೆ. ನಾನು ಸುಮಾರು 30 ಲೀಟರ್ನಷ್ಟು ಮದ್ಯ ಸೇವಿಸಿದ್ದೆ. ಹೀಗಾಗಿ ಪದೇ ಪದೇ ಶೌಚಾಲಯಕ್ಕೆ ಹೋಗಬೇಕಾಗುತ್ತಿತ್ತು. ಇದು ಹೆಚ್ಚು ಸಮಯವನ್ನು ತಿಂದುಹಾಕಿತು ಎಂದೂ ಆತ ಹೇಳಿಕೊಂಡಿದ್ದಾನೆ.
ಈ ಕುಡಿತದ ದಾಖಲೆಯಲ್ಲಿ ಒಂದು ಒಳ್ಳೆಯ ಉದ್ದೇಶವೂ ಇದೆ..! ಹೌದು, 22 ವರ್ಷ ವಯಸ್ಸಿನ, UK ಯ ಬ್ರೈಟನ್ ನಗರದಲ್ಲಿ ನೇಥನ್ ಕ್ರಿಂಪ್ ದಾಖಲೆಯೊಂದನ್ನು ಮುರಿಯಲು 24 ಗಂಟೆಗಳ ಅವಧಿಯಲ್ಲಿ 67 ವಿವಿಧ ಪಬ್ಗಳಲ್ಲಿ ಮದ್ಯಪಾನ ಸೇವಿಸಿದ್ದಾನೆ. ಆಗಸ್ಟ್ನಲ್ಲಿ, ಅವನು GoFundMe ಎಂಬ ಅಭಿಯಾನವನ್ನು ರಚಿಸಿದ್ದು, ಅಲ್ಲದೆ, ಶ್ವಾನಗಳ ಟ್ರಸ್ಟ್ ಗೆ ಹಣವನ್ನು ದಾನ ಮಾಡಲು ಜನರಿಗೆ ಮನವಿ ಮಾಡಿದ್ದಾನೆ. ಅಕ್ಟೋಬರ್ 2020 ರಲ್ಲಿ ಕ್ಯಾನ್ಸರ್ನಿಂದ ಮೃತಪಟ್ಟ ತನ್ನ ದಿವಂಗತ ನಾಯಿ ಕಾರಾಗಾಗಿ ನೇಥನ್ ಕ್ರಿಂಪ್ ಈ ಸವಾಲನ್ನು ತೆಗೆದುಕೊಂಡಿದ್ದ ಎಂದು ತಿಳಿದುಬಂದಿದೆ.