ನ್ಯೂಸ್ ನಾಟೌಟ್: ಉತ್ತರಪ್ರದೇಶದ ಲಖಿಂಪುರ ಖೇರಿಯಲ್ಲಿ ಬುಧವಾರ ಖಾಸಗಿ ಬಸ್ ಮತ್ತು ಮಿನಿ ಟ್ರಕ್ ನಡುವೆ ಸಂಭವಿಸಿದ ಅಪಘಾತದಲ್ಲಿ 10 ಮಂದಿ ಸಾವಿಗೀಡಾಗಿ, 14 ಮಂದಿ ಗಾಯಗೊಂಡಿದ್ದರು.
ಈ ಅಪಘಾತದ ಭೀಕರತೆ ಹಾಗೂ ಅಪಘಾತದಲ್ಲಿ ಗಾಯಗೊಂಡ ಬಡ ಸಂತ್ರಸ್ತರನ್ನು ಕಂಡು ಲಖನೌ ವಿಭಾಗೀಯ ಕಮೀಷನರ್ ಹಾಗೂ ಐಎಎಸ್ ಅಧಿಕಾರಿಣಿ ಡಾ.ರೋಶನ್ ಜಾಕೋಬ್ ಅವರು ಗಳಗಳನೇ ಅತ್ತಿದ್ದಾರೆ. ಗಾಯಾಳುಗಳನ್ನು ದಾಖಲು ಮಾಡಿದ್ದ ಲಖನೌ ಆಸ್ಪತ್ರೆಗೆ ದೌಡಾಯಿಸಿದ ಡಾ ರೋಶನ್ ಅವರು, ಗಾಯಗೊಂಡಿದ್ದ ಮಗುವೊಂದರ ಬಳಿ ತೆರಳಿ ಮಗುವಿನ ತಾಯಿಗೆ ಸಮಾಧಾನ ಮಾಡಿದ್ದಾರೆ. ನಂತರ ಮಗುವಿನ ಪರಿಸ್ಥಿತಿ ಕಂಡು ಕಣ್ಣೀರಾಗಿದ್ದಾರೆ. ಘಟನೆಗೆ ಸಂಬಂಧಿಸಿದ ವಿಡಿಯೊಗಳು ವೈರಲ್ ಆಗಿವೆ.
ಧೌರ್ಹರಾದಿಂದ ಲಖನೌಗೆ ತೆರಳುತ್ತಿದ್ದ ಬಸ್, ರಾಷ್ಟ್ರೀಯ ಹೆದ್ದಾರಿ 730ರಲ್ಲಿನ ಐರಾ ಸೇತುವೆ ಕಡೆಯಿಂದ ವಿರುದ್ಧ ದಿಕ್ಕಿನಿಂದ ಬರುತ್ತಿದ್ದ ಮಿನಿ ಟ್ರಕ್ವೊಂದಕ್ಕೆ ಡಿಕ್ಕಿ ಹೊಡೆದಿದೆ. ಸಾವಿನ ಸಂಖ್ಯೆ ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಉಪ ಪೊಲೀಸ್ ವರಿಷ್ಠಾಧಿಕಾರಿ ಪ್ರೀತಂಪಾಲ್ ಸಿಂಗ್ ತಿಳಿಸಿದ್ದಾರೆ.