ನ್ಯೂಸ್ ನಾಟೌಟ್: ‘ಭಾರತ್ ಜೋಡೋ ನಡಿಗೆಯಲ್ಲಿ ಹೆಚ್ಚಿನ ಜನರನ್ನು ಸೇರಿಸಿ ಮುಖಂಡರು ಶಕ್ತಿ ಪ್ರದರ್ಶಿಸಬೇಕು. ಮರ್ಯಾದೆ ಕಾಪಾಡಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹೇಳಿದ್ದಾರೆ.
ಇಲ್ಲಿನ ಕಾಂಗ್ರೆಸ್ ಭವನದ ಆವರಣದಲ್ಲಿ ಭಾನುವಾರ ಆಯೋಜಿಸಿದ್ದ ‘ಭಾರತ ಜೋಡೋ’ ಪಾದಯಾತ್ರೆ ಪೂರ್ವ ಸಿದ್ಧತೆ ಮತ್ತು ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು. ಸಿದ್ದರಾಮಯ್ಯ ಹುಟ್ಟು ಹಬ್ಬ, ಸ್ವಾತಂತ್ರ್ಯ ರ್ಯಾಲಿಯಲ್ಲಿ ನಡೆಯಲಿಲ್ಲವೇ? ಮುಖ ತೋರಿಸಿ, ತಿಂಡಿ ತಿಂದು ಹೋದರೆ ಆಗುವುದಿಲ್ಲ. ದಾವಣಗೆರೆಗೆ ಹಿಂದಿನ ದಿನವೇ ಹೋಗಿರಲಿಲ್ಲವೇ? ಪ್ರತಿ ಶಾಸಕರು 10ರಿಂದ 15ಸಾವಿರ ಮಂದಿಯನ್ನು ಕರೆದುಕೊಂಡು ಬರಬೇಕು. ಮರ್ಯಾದೆ ಕಾಪಾಡಬೇಕು. ಇಲ್ಲದಿದ್ದರೆ ಸಿದ್ದರಾಮಯ್ಯ, ನನ್ನ ಹಾಗೂ ಮುಖಂಡರ ಮರ್ಯಾದೆ ಹೋಗುತ್ತದೆ’ ಎಂದು ಹೇಳಿದರು.