ನ್ಯೂಸ್ ನಾಟೌಟ್ : ಅಕ್ರಮವಾಗಿ ಬೀಟೆ ಮರಗಳನ್ನು ಸಾಗಿಸುತ್ತಿದ್ದ ನಾಲ್ವರು ಆರೋಪಿಗಳನ್ನು ಕುಶಾಲನಗರ ಅರಣ್ಯಾಧಿಕಾರಿಗಳು ಮಾಲು ಸಹಿತ ಬಂಧಿಸಿದ್ದಾರೆ. 10 ಲಕ್ಷ ರೂ.ಗೂ ಅಧಿಕ ಮೌಲ್ಯದ ಮರ ಮತ್ತು2 ವಾಹನವನ್ನು ವಶಪಡಿಸಿಕೊಂಡಿದ್ದಾರೆ.
ದೊಡ್ಡಬೆಟ್ಟಗೇರಿ ಗ್ರಾಮ ವ್ಯಾಪ್ತಿಯಲ್ಲಿ ಟಾಟಾ ಎಸಿ ಮತ್ತುಬೊ ಲೇರೋ ಜೀಪ್ ಗಳಲ್ಲಿ ಭತ್ತದ ಹೊ ಟ್ಟುಗಳನ್ನು ತುಂಬಿಸಿ ಬೀಟೆ ಮರದ ನಾಟಗಳನ್ನು ಸಾಗಿಸುತ್ತಿದ್ದ ಪ್ರಕರಣ ಬೆಳಕಿಗೆ ಬಂದಿದೆ. ವಾಹನದಲ್ಲಿದ್ದ ಎನ್.ಕುಮಾರ, ರಮೇಶ, ತಂಗರಾಜ ಹಾಗೂ ಟಿ.ಆರ್. ರಮೇಶ ಎಂಬುವವರುಗಳನ್ನು ವಶಕ್ಕೆ ಪಡೆಯಲಾಗಿದೆ.