ನ್ಯೂಸ್ ನಾಟೌಟ್ : ಕೇರಳ ರಾಜ್ಯ ಲಾಟರಿಯ ಚರಿತ್ರೆಯಲ್ಲಿ ಇದೇ ಮೊದಲ ಬಾರಿಗೆ ಗರಿಷ್ಠ ಮೊತ್ತ ಹೊಂದಿದ 25 ಕೋಟಿ ರೂ. ಮೊದಲ ಬಹುಮಾನ ತಿರುವನಂತಪುರ ಜಿಲ್ಲೆಯ ಶ್ರೀವರಾಹಂ ನಿವಾಸಿ ಅನೂಪ್ ಅವರಿಗೆ ಲಭಿಸಿದೆ. ಇವರು ಖರೀದಿಸಿದ ಓಣಂ ಬಂಪರ್ನ ಟಿ.ಜೆ 750605 ಸಂಖ್ಯೆಯ ಟಿಕೆಟಿಗೆ ಬಂಪರ್ ಬಹುಮಾನ ಒಲಿದಿದೆ.
ಅನೂಪ್ ಶನಿವಾರ ಸಂಜೆ ಟಿಕೆಟ್ ಖರೀದಿಸಿದ್ದು, ಪಯವಂಗಾಡಿಯಲ್ಲಿ ಮಾರಾಟಗೊಂಡ ಟಿಕೆಟ್ಗೆ ಈ ಅದೃಷ್ಟ ಬಹುಮಾನ ಬಂದಿದೆ. ವಿಜೇತಗೆ ಶೇ.10 ಏಜೆನ್ಸಿ ಕಮಿಶನ್, ಶೇ. 30 ತೆರಿಗೆ ಕಳೆದು 15.75 ಕೋಟಿ ರೂ. ಕೈಸೇರಲಿದೆ. 67.50ಲಕ್ಷ ಟಿಕೆಟ್ ಮುದ್ರಿಸಲಾಗಿದ್ದು, ಇದರಲ್ಲಿ ಬಹುತೇಕ ಟಿಕೆಟ್ಗಳೂ ಮಾರಾಟಗೊಂಡಿದೆ. ಪ್ರತಿ ಟಿಕೆಟ್ ಬೆಲೆ 500ರೂ. ಆಗಿದೆ. ಪಾಲಕ್ಕಾಡ್ ಜಿಲ್ಲೆಯಲ್ಲಿ ಗರಿಷ್ಠ ಪ್ರಮಾಣದ ಟಿಕೆಟ್ ಮಾರಾಟಗೊಂಡಿದೆ. ಕೆಲಸ ಅರಸಿಕೊಂಡು ಮಲೇಷ್ಯಾಗೆ ತೆರಳಲು ಸಿದ್ಧತೆ ನಡೆಸುತ್ತಿದ್ದ ಆಟೋರಿಕ್ಷಾ ಚಾಲಕ ಅನೂಪ್ಗೆ ತಾಯಿ, ಪತ್ನಿ, ಪುತ್ರನಿದ್ದಾನೆ.