ನ್ಯೂಸ್ ನಾಟೌಟ್: ಜಗತ್ತಿನಲ್ಲಿ ಕೆಟ್ಟ ತಂದೆ ಇರಬಹುದು ಆದರೆ ಕೆಟ್ಟ ತಾಯಿ ಇರಲಿಕ್ಕಿಲ್ಲ ಎಂಬ ಮಾತಿದೆ. ಬಡತನವಿರಲಿ -ಸಿರಿತನವಿರಲಿ ತಾಯಿ ಪ್ರೀತಿಗೆ ಎಂದಿಗೂ ಸಾಟಿಯಿಲ್ಲ. ಆದ್ರೆ ಇಲ್ಲೊಬ್ಬ ಕ್ರೂರಿ ತಾಯಿ ತನ್ನ ಮಗು ಹಠ ಮಾಡುತ್ತಿದೆ ಎಂಬ ಕಾರಣಕ್ಕೆ ಸಿಟ್ಟಿನಿಂದ ಪುಟ್ಟ ಮಗುವಿಗೆ ಕಾದ ಸಟ್ಟುಗದಿಂದ ಬರೆ ಎಳೆದ ಘಟನೆ ನಡೆದಿದೆ.
ಸುಳ್ಯ ನಗರದ ನಾವೂರಿನಿಂದ ಕರುಳು ಹಿಂಡುವ ಘಟನೆ ವರದಿಯಾಗಿದ್ದು ಏನೂ ಅರಿಯದ ಪುಟ್ಟ ಮಗುವಿನ ಮೇಲೆ ತಾಯಿಯ ವರ್ತನೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಘಟನೆ ಬಗ್ಗೆ ಮಾಹಿತಿ ಪಡೆದು ಪರಿಶೀಲಿಸಿದ ಸಿಡಿಪಿಒ ರಶ್ಮಿಯವರು ಮಗುವಿನ ಮೈತುಂಬಾ ಗಾಯಗಳಾಗಿತ್ತು ಎಂದು ತಿಳಿಸಿದ್ದಾರೆ. ಸದ್ಯ ಮಗುವನ್ನು ಸಿ.ಡಿ.ಪಿ.ಒ. ಅವರು ಸುಳ್ಯ ಸರಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಮಗು ಚೇತರಿಸಿಕೊಳ್ಳುತ್ತಿದೆ. ಘಟನೆ ಕುರಿತಂತೆ ಸುಳ್ಯ ಠಾಣೆಗೆ ಮಾಹಿತಿ ಕೊಡಲಾಗಿದೆ.