ನ್ಯೂಸ್ ನಾಟೌಟ್: ಪ್ರವೀಣ್ ನೆಟ್ಟಾರ್, ಮಸೂದ್, ಫಾಜಿಲ್ ಹತ್ಯೆಯ ಬಳಿಕ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ವಾತಾವರಣ ಅತ್ಯಂತ ಸೂಕ್ಷ್ಮವಾಗಿದೆ. ಪೊಲೀಸರು ಇಲಾಖೆ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರುವುದಕ್ಕೆ ಹರಸಾಹಸ ಮಾಡುತ್ತಿದೆ. ಇಂತಹ ಸಂದರ್ಭದಲ್ಲಿ ಯುವಕನೊಬ್ಬ ಊರಿಡೀ ತಲವಾರು ಹಿಡಿದುಕೊಂಡು ಸುತ್ತಾಡಿ ಅತಿರೇಕ ಮೆರೆದಿದ್ದಾನೆ. ಈತನ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ರಸ್ತೆಯಲ್ಲಿ ತಲವಾರು ಹಿಡಿದು ಭಯದ ವಾತಾವರಣವನ್ನು ನಿರ್ಮಿಸಿದ ಯುವಕ ಸುಳ್ಯದ ಕನಕಮಜಲಿನವ ಎಂದು ಹೇಳಲಾಗುತ್ತಿದೆ. ಕೆಲವು ದಿನಗಳ ಹಿಂದೆ ದುಷ್ಕರ್ಮಿಗಳ ಅಮಾನುಷ ಕೃತ್ಯಕ್ಕೆ ಬಲಿಯಾದ ಪ್ರವೀಣ್ ನೆಟ್ಟಾರ್ ಅವರ ಬ್ಯಾನರ್ ಅಳವಡಿಸಲು ಪ್ಲಾಸ್ಟಿಕ್ ಬಳಸದಂತೆ ಪಂಚಾಯತ್ ನಿಂದ ತಿಳಿಸಲಾಗಿದೆ. ಆದರೆ ಸಂದೀಪ್ ಅನ್ನುವ ವ್ಯಕ್ತಿ ಪ್ಲಾಸ್ಟಿಕ್ ಬ್ಯಾನರ್ ಅಳವಡಿಸಿದ್ದರಿಂದ ಗ್ರಾಮ ಪಂಚಾಯತ್ ನವರು ಅದನ್ನು ತೆರವುಗೊಳಿಸಿದ್ದು ಇದರಿಂದ ಆಕ್ರೋಶಗೊಂಡ ಆತ ತಲ್ವಾರ್ ಹಿಡಿದು ರಸ್ತೆಯಲ್ಲೆಲ್ಲ ಓಡಾಟ ಮಾಡಿದ್ದಾನೆ ಎಂದು ಹೇಳಲಾಗುತ್ತಿದೆ. ಈ ಕುರಿತು ವಿಡಿಯೋವೊಂದು ಸಿಕ್ಕಾಪಟ್ಟೆ ವೈರಲ್ ಆಗಿದೆ.