ನ್ಯೂಸ್ ನಾಟೌಟ್: ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಗುಡ್ಡವೊಂದು ಮನೆ ಮೇಲೆ ಕುಸಿದ ಪರಿಣಾಮ ಎರಡು ಮಕ್ಕಳು ಮೃತಪಟ್ಟಿದ್ದಾರೆ. ಮೃತರನ್ನು ಶೃತಿ ಮತ್ತು ಜ್ಞಾನಶ್ರೀ ಎಂದು ಗುರುತಿಸಲಾಗಿದೆ.
ಸೋಮವಾರ (ಆ.೧) ರಾತ್ರಿ ಸಂಭವಿಸಿದ ದುರಂತದಲ್ಲಿ ಹೊಸೊಳಿಕೆ ಕುಸುಮಾಧರ ಅವರ ಮನೆಯ ಮೇಲೆ ಬರೆ ಕುಸಿದಿತ್ತು. ಏನೂ ಅರಿಯದ ಎರಡು ಮಕ್ಕಳು ಮಣ್ಣಿನಡಿಗೆ ಆಗಿದ್ದರು. ಇದೀಗ ಮಣ್ಣಿನಡಿಗೆ ಆಗಿದ್ದ ಇಬ್ಬರೂ ಹೆಣ್ಣು ಮಕ್ಕಳ ಮೃತದೇಹ ಸಿಕ್ಕಿವೆ ಎಂದು ವರದಿಯಾಗಿದೆ. ದುರಂತ ನಡೆಯುವ ಸಂದರ್ಭದಲ್ಲಿ ಇಬ್ಬರು ಮಕ್ಕಳನ್ನು ಮನೆಯಲ್ಲಿ ಬಿಟ್ಟು ಮಹಿಳೆ ಅಂಗಡಿಗೆ ಹೋಗಿದ್ದರು ಎನ್ನಲಾಗಿದೆ. ಹೀಗೆ ಹೋದವರು ವಾಪಸ್ ಬಂದು ನೋಡಿದಾಗ ಗುಡ್ಡ ಸಂಪೂರ್ಣವಾಗಿ ಮನೆಯ ಮೇಲೆ ಕುಸಿದು ಬಿದ್ದಿತ್ತು ಎಂದು ತಿಳಿದು ಬಂದಿದೆ. ತಕ್ಷಣ ಸ್ಥಳೀಯರು ಸ್ಥಳಕ್ಕೆ ಬಂದು ಕಾರ್ಯಾಚರಣೆ ನಡೆಸಿದರು. ಬಹಳ ಸಮಯದ ಬಳಿಕ ಮೃತ ದೇಹಗಳನ್ನು ಹೊರಕ್ಕೆ ತೆಗೆಯಲಾಯಿತು.