ನ್ಯೂಸ್ ನಾಟೌಟ್ : ಪ್ರವಾಹ ಸ್ಥಳದಲ್ಲಿ ಮರ ತೆರವು ಕಾರ್ಯ ನಡೆಸುತ್ತಿದ್ದಾಗ ಹರಿಹರದಲ್ಲಿ ಸಂಭವನೀಯ ಭಾರಿ ದುರಂತವೊಂದನ್ನು ಯುವಕನೊಬ್ಬ ತಡೆದ ಘಟನೆ ವರದಿಯಾಗಿದೆ. ಕ್ರೇನ್ ಆಪರೇಟರ್ ವೊಬ್ಬರು ಆಯತಪ್ಪಿ ನದಿಗೆ ಬಿದ್ದರು. ತಕ್ಷಣ ಯುವಕನೊಬ್ಬ ಹರಸಾಹಸ ನಡೆಸಿ ಅವರನ್ನು ರಭಸದಿಂದ ಹರಿಯುವ ನದಿ ನೀರಿನಿಂದ ಮೇಲಕ್ಕೆ ತಂದಿದ್ದಾನೆ. ಆತನ ಸಾಹಸಕ್ಕೆ ಎಲ್ಲೆಡೆಯಿಂದ ಮೆಚ್ಚುಗೆ ವ್ಯಕ್ತವಾಗಿದೆ.
ಹರಿಹರ ಪ್ರವಾಹ ಸ್ಥಳದಲ್ಲಿ ಮರ ತೆರವು ಕಾರ್ಯ ನಡೆಯುತ್ತಿತ್ತು. ಈ ಸಂದರ್ಭದಲ್ಲಿ ಆಕಸ್ಮಿಕವಾಗಿ ಕ್ರೇನ್ ಆಪರೇಟರ್ ಶರೀಫ್ ನದಿಗೆ ಬಿದ್ದರು. ಅಪರೇಟರ್ ನೀರಿಗೆ ಬಿದ್ದ ತಕ್ಷಣ ಸೋಮಶೇಖರ್ ಕಟ್ಟೆಮನೆ ಎಂಬವರು ನೀರಿಗೆ ಧುಮುಕಿ ಅವರನ್ನು ಬದುಕಿಸಿದರು. ನಂತರ ಅಲ್ಲೇ ಇದ್ದ ಜೆಸಿಬಿ ಸಹಾಯ ಬಳಸಿ ಅವರನ್ನು ರಕ್ಷಿಸಲಾಯಿತು. ಸೋ ಮಶೇಖರ ಶೇಖರ್ ಕಾರ್ಯಕ್ಕೆ ಸಾರ್ವಜನಿಕ ವಲಯದಿಂದ ಮೆಚ್ಚುಗೆ ವ್ಯಕ್ತವಾಗಿದೆ.