ನ್ಯೂಸ್ ನಾಟೌಟ್: ಕಿಂಡಿ ಅಣೆಕಟ್ಟು ಸಮಸ್ಯೆ ಕೊಯನಾಡಿನಲ್ಲಿ ಭುಗಿಲೆದ್ದಿದ್ದು ಕೂಡಲೇ ಕಿಂಡಿ ಅಣೆಕಟ್ಟು ತೆರವುಗೊಳಿಸಬೇಕೆಂದು ಸ್ಥಳೀಯರು ಒತ್ತಾಯಿಸಿದ್ದು ಮನವಿಗೆ ಸ್ಪಂದಿಸದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಸ್ಥಳೀಯರು ಕೊಡಗು ಶಾಸಕ ಬೋಪಯ್ಯ ಎದುರು ಆಕ್ರೋಶ ವ್ಯಕ್ತಪಡಿಸಿದ ಘಟನೆ ಮಂಗಳವಾರ ನಡೆದಿದೆ.
ಕೊಯನಾಡಿನಲ್ಲಿ ಸೇತುವೆ ಸಮೀಪ ಕಿಂಡಿ ಅಣೆಕಟ್ಟು ನಿರ್ಮಿಸಲಾಗಿದೆ.ಮಳೆಗಾಲದ ಸಮಯದಲ್ಲಿ ಮಳೆ ನೀರಿನ ಜತೆಗೆ ಬಂದ ದೈತ್ಯ ಗಾತ್ರದ ಮರಗಳು ಈ ಕಿಂಡಿ ಅಣೆಕಟ್ಟಿನಲ್ಲಿ ಸಿಕ್ಕಿ ಹಾಕಿಕೊಳ್ಳುತ್ತದೆ. ಹಾಗೆ ಸಿಕ್ಕಿ ಹಾಕಿಕೊಂಡಾಗ ನೀರು ಬ್ಲಾಕ್ ಆಗಿ ಹತ್ತಿರದ ಮನೆಗಳಿಗೆ ನುಗ್ಗುತ್ತಿದೆ. ಇಷ್ಟು ವರ್ಷದಿಂದ ಇಂತಹ ಘಟನೆ ನಡೆಯುತ್ತಿಲ್ಲ. ಆದರೆ ಕಿಂಡಿ ಅಣೆಕಟ್ಟು ನಿರ್ಮಾಣವಾದ ಬಳಿಕ ಪ್ರತಿ ಪ್ರವಾಹ ಬಂದಾಗಲೂ ಮಳೆ ನೀರು ಮನೆಗಳಿಗೆ ನುಗ್ಗುತ್ತಿದೆ. ಇದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ. ಈ ಸಿಟ್ಟು ಮಂಗಳವಾರ ಸ್ಥಳಕ್ಕೆ ಶಾಸಕ ಬೋಪಯ್ಯ ಬಂದಾಗ ಸ್ಫೋಟಿಸಿತು. ಎಲ್ಲಿವರೆಗೆ ಅಂದ್ರೆ ಬೋಪಯ್ಯ ಅವರನ್ನು ಐದಾರು ಮನೆಯ ಕುಟುಂಬ ಸದಸ್ಯರು ತೀವ್ರ ತರಾಟೆಗೆ ತೆಗೆದುಕೊಂಡರು. ಮಾತ್ರವಲ್ಲ ನೀವು ಸಮಸ್ಯೆ ಬಗೆಹರಿಸದಿದ್ದರೆ ಇದೇ ಪಯಸ್ವಿನಿ ಹೊಳೆಗೆ ಕುಟುಂಬ ಸದಸ್ಯರೆಲ್ಲ ಹಾರಿ ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ. ನಮ್ಮ ಸಾವಿಗೆ ಕಾರಣವನ್ನೂ ಬರೆದಿಡುತ್ತೇವೆ ಎಂದು ಎಚ್ಚರಿಸಿದ್ದಾರೆ.