ನ್ಯೂಸ್ ನಾಟೌಟ್ : ಸಂಪಾಜೆ, ಕೊಯನಾಡು ಹಾಗೂ ಕಲ್ಲುಗುಂಡಿ ಭಾಗಗಳಲ್ಲಿ ಮತ್ತೆ ಪ್ರವಾಹದ ಪರಿಸ್ಥಿತಿ ಎದುರಾಗುವ ಸಾಧ್ಯತೆ ಆ.೨ಕ್ಕೆ ತಡರಾತ್ರಿ ೧೧.೩೦ ರ ಸುಮಾರಿಗೆ ಕಾಣಿಸುತ್ತಿದೆ. ಭಾರಿ ಮಳೆಯಿಂದ ನದಿ , ಹಳ್ಳ , ಕೊಳ್ಳಗಳು ತುಂಬಿ ತುಳುಕುತ್ತಿವೆ. ಸತತ ೨ನೇ ಬಾರಿಗೆ ಕಲ್ಲುಗುಂಡಿ , ಸಂಪಾಜೆ ಹಾಗೂ ಕೊಯನಾಡಿನ ಮನೆ, ಅಂಗಡಿಗಳು ನೀರಿನ ರಭಸಕ್ಕೆ ಸಿಲುಕುವ ಸಾಧ್ಯತೆ ದಟ್ಟವಾಗಿದೆ.
ಈ ಮಳೆ ಅಲ್ಲಿಗೆ ಕಡಿಮೆಯಾದರೆ ಮುಂದಿನ ಅಪಾಯಗಳಿಲ್ಲ. ಆದರೆ ಮಂಗಳವಾರ ರಾತ್ರಿ ೧೧.೩೦ರ ಸುಮಾರಿಗೆ ಭಾರಿ ಮಟ್ಟದಲ್ಲಿ ಮಳೆಯಾಗುತ್ತಿದ್ದು ಪಯಸ್ವಿನಿ ಉಕ್ಕೇರುತ್ತಿದ್ದಾಳೆ. ಈ ಮಳೆ ಇನ್ನೊಂದು ಗಂಟೆ ಹೀಗೆ ಸುರಿದದ್ದೇ ಆದರೆ ಭಾರಿ ಮಟ್ಟದ ಪ್ರವಾಹ ಸ್ಥಿತಿಯನ್ನು ಜನರು ಮತ್ತೊಮ್ಮೆ ಎದುರಿಸಬೇಕಾಗಿ ಬರಬಹುದು. ಹೀಗಾಗಿ ಪಯಸ್ವಿನಿ ನದಿ ತೀರದಲ್ಲಿರುವ ಜನರು ಹೆಚ್ಚಿನ ಎಚ್ಚರಿಕೆಯನ್ನು ವಹಿಸಬೇಕಿದೆ. ಜನರನ್ನು ಸುರಕ್ಷಿತ ಸ್ಥಳಗಳತ್ತ ಕಳುಹಿಸುವ ವ್ಯವಸ್ಥೆಯನ್ನು ಈಗಾಗಲೇ ಮಾಡಿದ್ದು ಇನ್ನು ಯಾರಾದರೂ ಉಳಿದುಕೊಂಡಿದ್ದರೆ ಅಂತಹ ಕುಟುಂಬಗಳನ್ನು ತಕ್ಷಣ ಅಲ್ಲಿಂದ ಸುರಕ್ಷಿತ ಪ್ರದೇಶಕ್ಕೆ ಕಳುಹಿಸುವ ಕೆಲಸ ಆಗಬೇಕಿದೆ.