ನ್ಯೂಸ್ ನಾಟೌಟ್: ಪ್ರೀತಿ ಕುರುಡು ಎನ್ನುವುದಕ್ಕೆ ಇಲ್ಲೊಂದು ಜ್ವಲಂತ ಉದಾಹರಣೆಯನ್ನು ನೀವು ನೋಡಬಹುದು. 37 ವರ್ಷದ ಯುವಕನೋರ್ವ 70 ವರ್ಷದ ಮುದುಕಿಯೊಬ್ಬಳನ್ನು ವಿವಾಹವಾಗಿದ್ದಾನೆ. ಕಲಿಯುಗದಲ್ಲಿ ನಡೆಯುತ್ತಿರುವ ಅಚ್ಚರಿಗಳಲ್ಲಿ ಇದೂ ಒಂದು ಎನ್ನುವುದು ವಿಶೇಷ.
ತಾವಿಬ್ಬರೂ ಬಾಲ್ಯದಿಂದಲೇ ಪ್ರೀತಿ ಮಾಡುತ್ತಿದ್ದೆವು. ಹಾಗಾಗಿ ಈಗ ಮದುವೆಯಾಗಿರುವುದಾಗಿ “ನವ” ದಂಪತಿಗಳು ಹೇಳಿದ್ದಾರೆ. ಬಹಳ ದೀರ್ಘಕಾಲದಿಂದ ನಾವಿಬ್ಬರೂ ಪ್ರೀತಿ ಮಾಡುತ್ತಿದ್ದೆವು. ಆದರೆ, ನಾವಿಬ್ಬರೂ ವಯಸ್ಸಿನಲ್ಲಿದ್ದಾಗ ಎರಡೂ ಕುಟುಂಬಗಳು ನಮ್ಮ ಪ್ರೀತಿಗೆ ಸಮ್ಮತಿ ನೀಡಿರಲಿಲ್ಲ. ವಯಸ್ಸಿನ ಅಂತರದ ಕಾರಣ ನೀಡಿ ಅವರು ಮದುವೆಗೆ ಒಪ್ಪಿರಲಿಲ್ಲ. ಯುವಕನಿಗೆ ಬೇರೆ ಮದುವೆ ಮಾಡಿದ್ದರು. ಮೊದಲ ಮದುವೆಯಿಂದ ಯುವಕ 6 ಮಂದಿ ಮಕ್ಕಳನ್ನೂ ಹೊಂದಿದ್ದಾರೆ. ಇನ್ನೊಂದೆಡೆ 70 ವರ್ಷದ ಅಜ್ಜಿ ಮಾತ್ರ, ಯುವಕನನ್ನು ಮದುವೆಯಾಗುವವರೆಗೂ ಕನ್ಯೆಯಾಗಿಯೇ ಉಳಿದಿದ್ದರು. 37 ವರ್ಷದ ಇಫ್ತಿಕಾರ್ ಹಾಗೂ 70 ವರ್ಷದ ಕಿಶ್ವರ್ ಬಿಬಿ ನಡುವೆ ಈ ಅಪರೂಪದ ಮದುವೆ ನಡೆದಿದೆ. ಇಫ್ತಿಕಾರ್ ಹಾಗೂ ಕಿಶ್ವರ್ ಬಿಬಿ ನಡುವೆ 33 ವರ್ಷಗಳ ಅಂತರವಿದೆ. ಕೊನೆಗೂ ದೀರ್ಘಕಾಲದಿಂದ ಪ್ರೀತಿ ಮಾಡುತ್ತಿದ್ದ ಇವರಿಬ್ಬರ ನಡುವೆ ವಿವಾಹ ನಡೆಯುವುದರೊಂದಿಗೆ ಇವರ ಆಸೆಯೂ ಈಡೇರಿದೆ. ಅದಲ್ಲದೆ, ಪಾಕಿಸ್ತಾನದಲ್ಲಿ ಇವರ ಮದುವೆಯ ವಿಡಿಯೋಗಳು ಕೂಡ ದೊಡ್ಡಮಟ್ಟದಲ್ಲಿ ವೈರಲ್ ಆಗಿವೆ. ಪಾಕಿಸ್ತಾನದಲ್ಲಿ ಇತ್ತೀಚಿನ ದಿನಗಳಲ್ಲಿ ಚರ್ಚೆಗೆ ಗ್ರಾಸವಾಗಿರುವ ಮದುವೆ ಇದಾಗಿದೆ.