ನ್ಯೂಸ್ ನಾಟೌಟ್: ಪ್ರಧಾನಿ ನರೇಂದ್ರ ಮೋದಿ ಅವರು ನಿವಾಸದಲ್ಲಿ ರಕ್ಷಬಂಧನವನ್ನು ಆಚರಿಸಿದ್ದು, ಈ ಸಂದರ್ಭದಲ್ಲಿ ತಮ್ಮ ನಿವಾಸದ ಸಿಬ್ಬಂದಿಯ ಹೆಣ್ಣುಮಕ್ಕಳು ಮೋದಿಗೆ ರಾಖಿ ಕಟ್ಟಿದರು.
ಪ್ರಧಾನಿ ಅವರ ಮನೆಯಲ್ಲಿ ನಡೆದ ಈ ರಕ್ಷಾ ಬಂಧನ ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿ ಕಚೇರಿಯಲ್ಲಿ (PMO) ಕೆಲಸ ಮಾಡುವ ಕಸ ಗುಡಿಸುವ, ತೋಟಗಾರರು, ಚಾಲಕರು ಸೇರಿದಂತೆ ಇನ್ನಿತರೆ ಕೆಲಸ ಮಾಡುವ ಸಿಬ್ಬಂದಿಯ ಹೆಣ್ಣು ಮಕ್ಕಳು ಭಾಗವಹಿಸಿ ರಾಖಿ ಕಟ್ಟಿದ್ದರು.