ನ್ಯೂಸ್ ನಾಟೌಟ್: ಕೊಡಗು ಜಿಲ್ಲೆಯ ಮಡಿಕೇರಿ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಗುಂಡಿನ ಸದ್ದು ಮಾರ್ಧನಿಸಿದೆ. ಚೆಟ್ಟಳ್ಳಿಯಲ್ಲಿ ಗುಂಡಿನ ಮೊರೆತ ಕೇಳಿ ಬಂದಿದ್ದು ಪತಿಯಿಂದ ಪತ್ನಿಯ ಭೀಕರ ಹತ್ಯೆಯಾಗಿದೆ.
ಚೇರಳ ಶ್ರೀಮಂಗಲದ ಬಟ್ಟೀರ ಷಷ್ಮಾ(43) ಹತ್ಯೆಯಾದ ಮಹಿಳೆ. ಪತಿ ಬಟ್ಟೀರ ಗೋಪಾಲ್(ಕಿಶನ್) ಗುಂಡು ಹೊಡೆದು ಪತ್ನಿಯನ್ನು ಹತ್ಯೆ ಮಾಡಿದ್ದಾರೆ. ಘಟನೆಗೆ ಕಾರಣ ತಿಳಿದು ಬಂದಿಲ್ಲ. ಸ್ಥಳಕ್ಕೆ ಮಡಿಕೇರಿ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.