ನ್ಯೂಸ್ ನಾಟೌಟ್: ಕರಾವಳಿಯಲ್ಲಿ ಎರಡು ದಿನ ರೆಡ್ ಅಲರ್ಟ್ ಘೋಷಿಸಲಾಗಿದೆ. ಈ ನಡುವೆ ಹಲವು ಕಡೆ ಅನಾಹುತ ಸಂಭವಿಸಿ ಸೇತುವೆಗಳು ಕೊಚ್ಚಿಕೊಂಡು ಹೋಗಿದೆ. ಇದೀಗ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಸಂಪಾಜೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಕೈಪಡ್ಕ ಸೇತುವೆಗೂ ಹಾನಿಯಾಗುವ ಸಾಧ್ಯತೆ ಇದೆ.
ಸತತ ಮೂರು ಸಲ ಭಾರಿ ಪ್ರವಾಹದ ಸ್ಥಿತಿಗೆ ಸಾಕ್ಷಿಯಾದ ಈ ಸೇತುವೆಯಲ್ಲಿ ಇದೀಗ ಭಾರಿ ಗಾತ್ರದ ಮರಗಳು ಸಿಕ್ಕಿ ಹಾಕಿಕೊಂಡಿವೆ. ಸೇತುವೆ ಬ್ಲಾಕ್ ಆಗಿದ್ದರಿಂದ ಸೇತುವೆಯ ಒಂದು ಭಾಗದಲ್ಲಿ ಮಾತ್ರ ನೀರು ಹರಿಯುತ್ತಿದ್ದು ಹೆಚ್ಚು ಮಳೆಯಾದ ಪಕ್ಷದಲ್ಲಿ ನೀರು ಸಮೀಪದ ಮನೆಗಳಿಗೆ ನುಗ್ಗುವ ಎಲ್ಲ ಸಾಧ್ಯತೆಗಳಿವೆ. ಅಲ್ಲದೆ ಸೇತುವೆಯ ಪಿಲ್ಲರ್ ಗೆ ಕೂಡ ಹೆಚ್ಚು ಒತ್ತಡ ಬಿದ್ದು ಕುಸಿಯುವ ಸಾಧ್ಯತೆ ಇದೆ. ಹೀಗಾಗಿ ತಕ್ಷಣ ಗ್ರಾಮ ಪಂಚಾಯತ್ ಆಡಳಿತ ವರ್ಗ ಇತ್ತ ಕಡೆ ಗಮನಹರಿಸಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.