ನ್ಯೂಸ್ ನಾಟೌಟ್: ರೈತನ ಮಗ ಇದೀಗ ದೇಶದ ಉಪ ರಾಷ್ಟ್ರಪತಿಯಾಗಿ ಆಯ್ಕೆಯಾಗಿದ್ದಾರೆ.
ಭಾರತದ ಉಪರಾಷ್ಟ್ರಪತಿಯಾಗಿ ಅಧಿಕೃತವಾಗಿ ಬಿಜೆಪಿ ಹಿರಿಯ ನಾಯಕ ಜಗದೀಪ್ ಧನಕರ್ ಆಯ್ಕೆಯಾಗಿರುವುದನ್ನು ಘೋಷಣೆ ಮಾಡಲಾಗಿದೆ. ದಾಖಲೆಯ ಅಂತರದಲ್ಲಿ ಎನ್.ಡಿ.ಎ. ಅಭ್ಯರ್ಥಿಗೆ ಜಯವಾಗಿದೆ. ಒಟ್ಟು 528 ರಲ್ಲಿ 346 ಮತಗಳನ್ನು ಪಡೆದು ಧನಕರ್ ಜಯಶಾಲಿಯಾಗಿದ್ದಾರೆ. ಯುಪಿಎ ಅಭ್ಯರ್ಥಿಯಾಗಿ ಕಣದಲ್ಲಿದ್ದ ಕರ್ನಾಟಕದ ಮಾರ್ಗರೇಟ್ ಆಳ್ವ ಅವರಿಗೆ ಮುಖಭಂಗವಾಗಿದೆ.