ನ್ಯೂಸ್ ನಾಟೌಟ್: ಭಾರತೀಯ ಸೈನ್ಯದಲ್ಲಿ ಸೇವೆ ಸಲ್ಲಿಸುತ್ತಿದ್ದ ಚಾಣಾಕ್ಷ ಶ್ವಾನವೊಂದು ಉಗ್ರರ ಗುಂಡಿನ ದಾಳಿಗೆ ಬಲಿಯಾಗಿದೆ.
ಇತ್ತೀಚೆಗೆ ಭಾರತೀಯ ಆರ್ಮಿ ಕಾಶ್ಮೀರದ ಬಾರಾಮುಲ್ಲಾದಲ್ಲಿ ಉಗ್ರರ ವಿರುದ್ಧ ಕಾರ್ಯಾಚರಣೆ ನಡೆಸುತ್ತಿತ್ತು. ಈ ವೇಳೆ ಭಾರತೀಯ ಆರ್ಮಿಯ ಅಲೆಕ್ಸ್ ಹೆಸರಿನ ಶ್ವಾನವೊಂದು ಕಾಶ್ಮೀರದಲ್ಲಿ ಕರ್ತವ್ಯ ನಿರತವಾಗಿತ್ತು. ಮನೆಯೊಂದದಲ್ಲಿ ಉಗ್ರರು ಅವಿತಿರುವ ಸುಳಿವು ಸಿಕ್ಕ ಭಾರತೀಯ ಸೈನಿಕರು ಸ್ಥಳಕ್ಕೆ ಧಾವಿಸಿದ್ರು.
ಈ ವೇಳೆ ಸೈನಿಕರೊಂದಿಗೆ ಬಂದ ಎಕ್ಸಪರ್ಟ್ ಅಲೆಕ್ಸ್ ಉಗ್ರರ ಸುಳಿವನ್ನ ಕನ್ಫರ್ಮ್ ಮಾಡಿತ್ತು. ಅಷ್ಟೇ ಅಲ್ಲ ಉಗ್ರರ ಮಟ್ಟ ಹಾಕಲು ಮುಂದೆ ಧಾವಿಸಿತ್ತು. ಈ ವೇಳೆ ಉಗ್ರರು ಅಲೆಕ್ಸ್ನನ್ನೇ ಗುರಿಯಾಗಿಸಿಕೊಂಡು ಗುಂಡು ಹಾರಿಸಿದ್ದಾರೆ. ಉಗ್ರರು ಹಾರಿಸಿದ್ದ ಗುಂಡುಗಳಲ್ಲಿ ಮೂರು ಅಲೆಕ್ಸ್ಗೆ ತಾಗಿದೆ. ತೀವ್ರ ರಕ್ತಸ್ರಾವದಿಂದ ಅಲೆಕ್ಸ್ ಸ್ಥಳದಲ್ಲಿಯೇ ಪ್ರಾಣ ಬಿಟ್ಟಿದೆ.