ನ್ಯೂಸ್ ನಾಟೌಟ್: ದಕ್ಷಿಣ ಕನ್ನಡ ಜಿಲ್ಲೆಗೆ ರೆಡ್ ಅಲರ್ಟ್ ಘೋಷಣೆಯಾಗಿದೆ. ಈಗಾಗಲೇ ಸುಳ್ಯ ತಾಲೂಕು, ಕೊಡಗು ಜಿಲ್ಲೆಯ ಹಲವು ಕಡೆ ಮತ್ತೆ ಮಳೆಯಾಟ ಆರಂಭವಾಗಿದೆ. ಈ ನಡುವೆ ನೆರೆ ಸಂಕಷ್ಟದಲ್ಲಿ ಸಿಲುಕಿರುವ ಜನರಿಗೆ ಸುಳ್ಯ ಸ್ನೇಹ ಶಿಕ್ಷಣ ಸಂಸ್ಥೆಯ ನಿರ್ದೇಶಕ ಡಾ. ಚಂದ್ರಶೇಖರ್ ದಾಮ್ಲೆ ನೆರವಿನ ಹಸ್ತ ಚಾಚಿದ್ದಾರೆ.
ಈಗಾಗಲೇ ಪಯಸ್ವಿನಿ ನದಿ ತೀರದಲ್ಲಿ ನೆರೆ ಸಂತ್ರಸ್ತರಾಗಿರುವ ಒಂದು ಕುಟುಂಬಕ್ಕೆ ದಾಮ್ಲೆಯವರು ತಮ್ಮ ಸ್ನೇಹ ಶಿಕ್ಷಣ ಸಂಸ್ಥೆಯಲ್ಲಿ ಆಶ್ರಯ ನೀಡಿದ್ದಾರೆ. ಸಂತ್ರಸ್ತರ ಜತೆಗೆ ಅವರ ಗೋವುಗಳಿಗೂ ಆಶ್ರಯ ನೀಡಿದ್ದಾರೆ. ಇದು ದಾಮ್ಲೆಯವರ ಮಾನವೀಯ ಮೌಲ್ಯಗಳುಳ್ಳ ಕಾಳಜಿಗೆ ಸಾಕ್ಷಿಯಾಗಿದೆ. ಯಾರಾದರೂ ಪ್ರವಾಹದಿಂದ ಅಥವಾ ಗುಡ್ಡ ಜರಿದು ಮನೆ ಕಳೆದುಕೊಂಡು ಎಲ್ಲೂ ಹೋಗಲು ಸಾಧ್ಯವಾಗದ ಪರಿಸ್ಥಿತಿಯಲ್ಲಿ ಇದ್ದರೆ ಅಂತಹವರು ತಾತ್ಕಾಲಿಕ ಆಶ್ರಯಕ್ಕಾಗಿ ನನ್ನನ್ನು ಸಂಪರ್ಕಿಸಬಹುದಾಗಿದೆ ಎಂದು ದಾಮ್ಲೆಯವರು ನ್ಯೂಸ್ ನಾಟೌಟ್ ಗೆ ತಿಳಿಸಿದ್ದಾರೆ. ಈ ಸುದ್ದಿಯನ್ನು ಆದಷ್ಟು ಶೇರ್ ಮಾಡಿಕೊಂಡು ಪ್ರಾಕೃತಿಕ ವಿಕೋಪಕ್ಕೆ ತುತ್ತಾಗಿ ಮನೆ ಕಳೆದುಕೊಂಡವರಿಗೆ ತಕ್ಷಣದಲ್ಲಿ ಆಶ್ರಯ ಪಡೆದುಕೊಳ್ಳುವುದಕ್ಕೆ ಸಹಾಯ ಮಾಡಬೇಕೆಂದು ನ್ಯೂಸ್ ನಾಟೌಟ್ ತಂಡ ಮನವಿ ಮಾಡುತ್ತದೆ. ಹೆಚ್ಚಿನ ಮಾಹಿತಿಗೆ ಡಾ ಚಂದ್ರಶೇಖರ್ ದಾಮ್ಲೆಯವರನ್ನು ಸಂಪರ್ಕಿಸಿ: 99455 06045