ನ್ಯೂಸ್ ನಾಟೌಟ್: ಕೊಡಗು ಜಿಲ್ಲೆಯಲ್ಲಿ 2ನೇ ದಿನವಾದ ಗುರುವಾರ ನಿಷೇಧಾಜ್ಞೆ ಮುಂದುವರಿದಿದೆ. ನಗರದ ಸೂಕ್ಷ್ಮ ಪ್ರದೇಶಗಳಲ್ಲಿ ಪೊಲೀಸರು ಪಥಸಂಚಲನ ನಡೆಸಿದರು.
ಸುಮಾರು 600 ಕ್ಕೂ ಹೆಚ್ಚಿನ ಪೊಲೀಸರನ್ನು ಹೊರಜಿಲ್ಲೆಗಳಿಂದ ಕರೆಸಲಾಗಿದೆ. ಕರ್ನಾಟಕ ರಾಜ್ಯ ಮೀಸಲು ಪಡೆಯ 15 ಹಾಗೂ ಜಿಲ್ಲಾ ಸಶಸ್ತ್ರ ಪಡೆ 13 ತುಕಡಿಗಳು ಪಥಸಂಚಲನದಲ್ಲಿ ಭಾಗಿಯಾದವು. ಇಲ್ಲಿನ ಚೌಕಿ, ಕಾಲೇಜು ರಸ್ತೆ, ಮಹದೇವಪೇಟೆ, ಮಾರುಕಟ್ಟೆ, ಜನರಲ್ ತಿಮ್ಮಯ್ಯ ವೃತ್ತಗಳಲ್ಲಿ ಬಿಗಿ ಭದ್ರತೆ ಏರ್ಪಡಿಸಲಾಗಿದೆ. ಈ ಮೂಲಕ ಕೊಡಗಿನಲ್ಲಿ ಬಾಲಬಿಚ್ಚಿದ್ರೆ ಹುಷಾರ್ ಅನ್ನುವ ಸಂದೇಶವನ್ನು ಸ್ಪಷ್ಟವಾಗಿ ಪೊಲೀಸರು ರವಾನಿಸಿದಂತಾಗಿದೆ.