ನ್ಯೂಸ್ ನಾಟೌಟ್: ಮುರುಘಾ ಮಠದ ಶಿವಕುಮಾರ ಸ್ವಾಮೀಜಿ ವಿರುದ್ಧ ಇದೀಗ ಲೈಂಗಿಕ ದೌರ್ಜನ್ಯದಂತಹ ಗಂಭೀರ ಪ್ರಕರಣ ದಾಖಲಾಗಿದ್ದು ಸ್ವಾಮೀಜಿ ಇಂದು (ಗುರುವಾರ) ಬಂಧನವಾಗುವ ಸಾಧ್ಯತೆಗಳು ಹೆಚ್ಚಿವೆ ಎಂದು ತಿಳಿದು ಬಂದಿದೆ.
ಪೋಕ್ಸೋ ದಂತಹ ಗಂಭೀರ ಪ್ರಕರಣದಲ್ಲಿ ಸಿಕ್ಕಿ ಹಾಕಿಕೊಂಡಿರುವ ಮುರುಘಾಶ್ರೀಗಳು ಎಸ್ ಸಿ ಹಾಗೂ ಎಸ್ ಟಿ ದೌರ್ಜನ್ಯ ತಡೆ ಕಾಯಿದೆ ಅಡಿಯಲ್ಲೂ ಪ್ರಕರಣ ದಾಖಲಿಸಲಾಗಿದೆ. ಈ ಎರಡೂ ಸೆಕ್ಷನ್ ಗಳ ಅಡಿಯಲ್ಲಿ ಶ್ರೀಗಳಿಗೆ ಜಾಮೀನು ರಹಿತ ಬಂಧನದ ಪ್ರಕರಣವಾಗಿದೆ. ಈ ಹಿನ್ನೆಲೆಯಲ್ಲಿ ಪೊಲೀಸರು ಅವರನ್ನು ನೇರವಾಗಿ ಬಂಧಿಸಿ ವಿಚಾರಣೆಗೆ ಒಳಪಡಿಸುವ ಸಾಧ್ಯತೆ ಹೆಚ್ಚಿದೆ ಎಂದು ತಿಳಿದು ಬಂದಿದೆ.
ನಿರೀಕ್ಷಣಾ ಜಾಮೀನು ಸಿಗದಿದ್ದರೆ ಹೈಕೋರ್ಟ್ ನಲ್ಲಿ ಸ್ವಾಮೀಜಿ ಅರ್ಜಿ ಸಲ್ಲಿಸಬಹುದು. ಶ್ರೀಗಳು ಒಂದು ವೇಳೆ ಬಂಧನ ಆದ್ರೆ ಜಾಮೀನಿಗೂ ಅವರು ಅರ್ಜಿ ಸಲ್ಲಿಸಲು ಅವಕಾಶವಿದೆ. ಸದ್ಯದ ಗಂಭೀರವಾದ ವಾತಾವರಣವನ್ನು ನೋಡುತ್ತಿದ್ದರೆ ಶ್ರೀಗಳು ಬಂಧನವಾದರೂ ಅಚ್ಚರಿ ಪಡಬೇಕಿಲ್ಲ. ಎರಡು ದಿನಗಳ ಹಿಂದೆ ಶ್ರೀಗಳ ವಿರುದ್ಧ ಲೈಂಗಿಕ ದೌರ್ಜನ್ಯ ದೂರು ದಾಖಲಾಗಿತ್ತು.