ನ್ಯೂಸ್ ನಾಟೌಟ್: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅದರಲ್ಲೂ ಬಿಜೆಪಿಯಲ್ಲಿ ಒಬ್ಬ ಗಟ್ಸ್ ಇರುವ ನಾಯಕರಿಲ್ಲ ಅನ್ನುವಂತಹ ಟೀಕೆ ಇತ್ತೀಚೆಗೆ ಹೆಚ್ಚಾಗುತ್ತಿದೆ. ಈ ನಡುವೆಯೇ ಕರಾವಳಿ ಬಿಜೆಪಿಯಲ್ಲಿ ತಾಕ್ಕತ್ತಿರುವ ವ್ಯಕ್ತಿ ಅಂದ್ರೆ ಅದು ಬೆಳ್ತಂಗಡಿಯ ಶಾಸಕ ಹರೀಶ್ ಪೂಂಜಾ ಅನ್ನುವ ಮಾತುಗಳೂ ಕೇಳಿ ಬರುತ್ತಿದೆ.
ಹೌದು, ಹರೀಶ್ ಪೂಂಜಾ ಅಂದ್ರೆನೇ ಕರಾವಳಿಯ ಫೈಯರ್ ಬ್ರ್ಯಾಂಡ್. ಅದರಲ್ಲೂ ಬಿಜೆಪಿ ನಾಯಕರ ಪೈಕಿಯೇ ಡಿಫರೆಂಟ್ ವರ್ಚಸ್ಸಿನ ಜನನಾಯಕ. ಅಭಿವೃದ್ಧಿ, ಪಕ್ಷದ ಸಂಘಟನೆ, ನಾಯಕತ್ವ ಹಾಗೂ ಬಡವರ ಕಷ್ಟಕ್ಕೆ ಸ್ಪಂದನೆ ಎಲ್ಲದರಲ್ಲೂ ಪೂಂಜಾಗೆ ಅಗ್ರಸ್ಥಾನ. ಓಟು ಪಡೆದು ಬಳಿಕ ಜನರನ್ನು ಮರೆತು ಅಧಿಕಾರ ಮಾಡುವ ಅದೆಷ್ಟೋ ಹೀನ ರಾಜಕಾರಣಿಗಳು ನಮ್ಮ ಮುಂದಿದ್ದಾರೆ. ಅಂತಹವರ ನಡುವಿನಲ್ಲಿ ಕಷ್ಟಗಳಿಗೆ ತುರ್ತಾಗಿ ಸ್ಪಂದಿಸುವ ಹರೀಶಣ್ಣ ರಂತಹ ಶಾಸಕರು ನಮ್ಮ ಊರಿಗೆ ಇರುವುದು ನಮ್ಮ ಅದೃಷ್ಟ ಅಂತಿದ್ದಾರೆ ಬೆಳ್ತಂಗಡಿಯ ಜನರು. ಅಂತಹ ನಾಯಕನ ಭಾಷಣ ಕೇಳುವುದಕ್ಕೆ ಅಭಿಮಾನಿಗಳು ಯಾವಾಗಲೂ ಹೆಚ್ಚಿನ ಸಂಖ್ಯೆಯಲ್ಲಿಯೇ ಸೇರುತ್ತಾರೆ. ಅವರ ಒಬ್ಬ ಕಟ್ಟಾಭಿಮಾನಿಗಳ ಪೈಕಿ ಸ್ವತಃ ಅವರ ತಂದೆ ಕೂಡ ಒಬ್ಬರು ಅನ್ನುವುದು ಅಚ್ಚರಿಯ ಸಂಗತಿ. ಹೌದು, ಭಾನುವಾರ ಇಡೀ ದೇಶ ಸ್ವಾತಂತ್ರ್ಯೋತ್ಸವದ ಸಂಭ್ರಮದಲ್ಲಿದ್ದರೆ ಬೆಳ್ತಂಗಡಿಯ ಶಾಸಕರ ತಂದೆ ಮಗನ ಭಾಷಣ ಕೇಳುವುದಕ್ಕಾಗಿ ಸೈಲಂಟಾಗಿ ನೆರೆದ ಜನರ ಮಧ್ಯ ನಿಂತಿರುವ ಫೋಟೋವೊಂದು ವೈರಲ್ ಆಗುತ್ತಿದೆ.
ರಾಜಕಾರಣಿಗಳ ತಂದೆ-ಮಕ್ಕಳು ಐಷಾರಾಮಿ ಕಾರಿನಲ್ಲಿ ಸೂಟು ಬೂಟು ಧರಿಸಿ ಬರುವುದನ್ನು ನೋಡಿದ್ದೇವೆ. ಆದರೆ ಸಾದಾ ಬಿಳಿ ಶರ್ಟ್, ಬಿಳಿ ಪಂಚೆ ಉಟ್ಟು ಹಿಂದಿನ ಸಾಲಿನಲ್ಲಿ ಕೊನೆಯ ತನಕ ನಿಂತುಕೊಂಡೇ ಮಗನ ಭಾಷಣ ಕೇಳಿದ ಶಾಸಕರ ತಂದೆಯ ಬಗ್ಗೆ ಮೆಚ್ಚುಗೆಯ ಮಾತು ಕೇಳಿ ಬರುತ್ತಿದೆ. ಅಂತೆಯೇ ಹರೀಶ್ ಪೂಂಜಾರ ಸರಳತೆ ಬಗ್ಗೆಯೂ ಜಾಲತಾಣದಲ್ಲಿ ಭಾರಿ ಚರ್ಚೆಯಾಗುತ್ತಿದೆ. ಇದೆಲ್ಲವೂ ಸಿನಿಮಾದಲ್ಲಿ ನಡೆಯುವುದನ್ನು ನೋಡಿದ್ದೇವೆ. ನಿಜಜೀವನದಲ್ಲೂ ನಡೆಯುತ್ತದೆ ಅನ್ನುವುದು ಅರಗಿಸಿಕೊಳ್ಳಲೇಬೇಕಿದೆ.