ನ್ಯೂಸ್ ನಾಟೌಟ್: ಬಿರುಸಿನ ಮಳೆಯಿಂದ ಉಕ್ಕಿ ಹರಿದ ಪಯಸ್ವಿನಿ ನದಿ ಪರಿಣಾಮ ಸುಳ್ಯ ಸಮೀಪದ ಅರಂಬೂರಿನಲ್ಲಿ ವಾಹನ ಪ್ರಯಾಣಿಕರು ಪರದಾಡಿದ ಘಟನೆ ಗುರುವಾರ ತಡರಾತ್ರಿ ನಡೆದಿದೆ.
ಪಯಸ್ವಿನಿ ನದಿ ನೀರು ರಾಷ್ಟ್ರೀಯ ಹೆದ್ದಾರಿಗೆ ಹರಿದುದರಿಂದ ತಡರಾತ್ರಿ ೧೨ ಗಂಟೆಯಿಂದ ಬೆಳ್ಳಂ ಬೆಳಗ್ಗೆ ೪ ಗಂಟೆ ತನಕ ಎಲ್ಲ ವಾಹನಗಳು ಸಾಲಿನಲ್ಲಿ ನಿಂತಿದ್ದವು. ನೀರು ಕಡಿಮೆ ಆಗದೆ ಇದ್ದುದರಿಂಧ ಬರೋಬ್ಬರಿ ನಾಲ್ಕು ಗಂಟೆ ಕಾದು ನೀರು ತಗ್ಗಿದ ಬಳಿಕ ಸುಳ್ಯದ ಕಡೆಗೆ ವಾಹನಗಳು ಸಂಚಾರ ಮಾಡಿದರೆ ವಿರುದ್ಧ ದಿಕ್ಕಿನಿಂದ ಬಂದ ವಾಹನಗಳು ಮಡಿಕೇರಿಯತ್ತ ಸಂಚಾರ ಮಾಡಿದವು. ಇದೇ ವೇಳೆ ಕಲ್ಲುಗುಂಡಿಯ ಕೂಲಿಶೆಡ್ ಬಳಿ ಪಯಸ್ವಿನಿ ನದಿ ನೀರು ಹರಿದ ಪರಿಣಾಮ ರಸ್ತೆ ಸಂಚಾರ ಸಂಪೂರ್ಣ ರದ್ದಾಗಿತ್ತು.