ನ್ಯೂಸ್ ನಾಟೌಟ್: ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಕಲ್ಲಡ್ಕದಲ್ಲಿ ಉಂಟಾದ ಭಾರಿ ಗುಂಡಿಯಿಂದ ತಾಸುಗಟ್ಟಲೆ ರಸ್ತೆಯಲ್ಲಿ ಭಾರಿ ಟ್ರಾಫಿಕ್ ಜಾಮ್ ಉಂಟಾಗಿ ವಾಹನ ಸವಾರರು ಪರದಾಟ ನಡೆಸಿರುವ ಘಟನೆ ಇಂದು ಬೆಳಗ್ಗೆ ನಡೆದಿದೆ. ಬೆಳಗ್ಗೆ 8 ಗಂಟೆಯಿಂದ ಆರಂಭವಾದ ಟ್ರಾಫಿಕ್ ಜಾಮ್ ಸಮಸ್ಯೆ 11 ಗಂಟೆವರೆಗೂ ಕಡಿಮೆ ಆಗಿಲ್ಲ. ಅಮ್ಟೂರು ಕ್ರಾಸ್ ಬಳಿ ದೊಡ್ಡ ಗುಂಡಿಯೊಂದು ರಸ್ತೆ ಮದ್ಯೆ ಬಾಯ್ತೆರೆದು ಕೊಂಡಿರುವುದು ಭಾರಿ ಸಮಸ್ಯೆಗೆ ಕಾರಣವಾಗಿದೆ. ತುರ್ತಾಗಿ ತೆರಳಬೇಕಿದ್ದ ಆಂಬ್ಯುಲೆನ್ಸ್ ವಾಹನಗಳು ಕೂಡ ಟ್ರಾಫಿಕ್ ಜಾಮ್ಗೆ ಸಿಲುಕಿಕೊಂಡಿದ್ದವು. ಈ ಭಾಗದಲ್ಲಿ ನಿರಂತರವಾಗಿ ಸಂಚಾರಕ್ಕೆ ಅಡಚಣೆಯಾಗುತ್ತಿದ್ದರೂ ಜನಪ್ರತಿನಿಧಿಗಳು ಗಮನಹರಿಸದಿರುವುದಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.
- +91 73497 60202
- [email protected]
- November 23, 2024 2:55 AM