ನ್ಯೂಸ್ ನಾಟೌಟ್: ಸೆಕ್ಸ್ ಸಿಡಿ ವಿವಾದದಲ್ಲಿ ಸಿಲುಕಿ ಭಾರಿ ಮುಜುಗರಕ್ಕೆ ಒಳಗಾಗಿದ್ದ ಸ್ವಾಮಿ ನಿತ್ಯಾನಂದ ಈಗ ಮತ್ತೊಮ್ಮೆ ಸುದ್ದಿಯಾಗಿದ್ದಾರೆ. ಈ ಬಾರಿಯೂ ಬಹುಭಾಷಾ ಚಿತ್ರ ನಟಿಯ ವಿಚಾರದಲ್ಲಿಯೇ ನಿತ್ಯಾನಂದ ಸುದ್ದಿಯಾಗಿರುವುದು ವಿಶೇಷ.
ಈ ಹಿಂದೆ ನಟಿ ರಂಜಿತಾ ಅವರೊಂದಿಗಿನ ರಾಸಲೀಲೆ ವಿಡಿಯೋ ವೈರಲ್ ಆಗಿ ನಿತ್ಯಾನಂದ ಇಮೇಜ್ ಡ್ಯಾಮೇಜ್ ಆಗಿತ್ತು. ನಂತರ ಕೋರ್ಟ್ , ಕಚೇರಿ ಅಂತ ನಿತ್ಯಾನಂದ ಸ್ವಾಮಿ ಭಾರಿ ಸಮಸ್ಯೆಗೆ ಸಿಲುಕಿಕೊಂಡಿದ್ದರು. ಅಲ್ಲದೆ ದಿನನಿತ್ಯ ಮಾಧ್ಯಮಗಳ ಕಾಟದಿಂದ ತಪ್ಪಿಸಿಕೊಳ್ಳುವುದಕ್ಕಾಗಿ ದ್ವೀಪ ರಾಷ್ಟ್ರವೊಂದನ್ನು ಖರೀದಿ ಮಾಡಿ ಅದಕ್ಕೆ ಕೈಲಾಸ ದೇಶ ಎನ್ನುವ ಹೆಸರು ನೀಡಿದರು. ಅಲ್ಲಿಗೆ ಈಗ ನಿತ್ಯಾನಂದ ಸ್ವಾಮಿಯೇ ಮುಖ್ಯಸ್ಥರಾಗಿದ್ದಾರೆ. ಅಂತಹ ಸ್ವಾಮಿ ಜತೆಗೆ ಮದುವೆಯಾಗುವುದಕ್ಕೆ ಸಿದ್ಧವಾಗಿರುವುದಾಗಿ ಬಹುಭಾಷಾ ನಟಿ ಪ್ರಿಯಾ ಆನಂದ್ ತಿಳಿಸಿದ್ದಾರೆ.
ಇತ್ತೀಚೆಗೆ ಯೂಟ್ಯೂಬ್ ಚಾನೆಲ್ ನ ಸಂದರ್ಶನವೊಂದರಲ್ಲಿ ಮಾತನಾಡಿರುವ ಪ್ರಿಯಾ, ನಾನು ನಿತ್ಯಾನಂದ ಸ್ವಾಮಿ ಅವರೊಂದಿಗೆ ಮದುವೆಯಾಗಬೇಕು ಎಂದು ಬಯಸುತ್ತಿದ್ದೇನೆ’ ಎಂದು ಹೇಳಿಕೊಂಡಿದ್ದಾರೆ. ಈ ಕುರಿತು ಸಂದರ್ಶನದಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ನಿತ್ಯಾನಂದ ವಿರುದ್ಧ ಹಲವು ಆರೋಪಗಳಿರಬಹುದು. ಆದರೆ, ಅವರನ್ನು ಅನೇಕರು ಇಷ್ಟಪಡುತ್ತಾರೆ. ಹಾಗಾದರೇ ಅವರಲ್ಲಿ ಏನಾದರೂ ವಿಶೇಷ ಗುಣ ಇರಬೇಕಾಲ್ಲವೇ ಎಂದು ಪ್ರಶ್ನಿಸಿರುವ ಪ್ರಿಯಾ, ನಾನು ಅವರೊಂದಿಗೆ ಮದುವೆಯಾದರೆ ಸರ್ ನೇಮ್ ಕೂಡ ಬದಲಾಯಿಸಬೇಕಾಗಿಲ್ಲ. ನಮ್ಮಿಬ್ಬರ ಹೆಸರು ಒಂದೇ ರೀತಿ ಇದೆ ಎಂದು ಚಟಾಕಿ ಹಾರಿಸಿದ್ದಾರೆ. ಕನ್ನಡ, ತೆಲುಗು, ತಮಿಳು, ಮಲಯಾಳಂ, ಹಿಂದೆ ಭಾಷೆಯ ಸಿನಿಮಾಗಳಲ್ಲಿ ನಟಿಸಿರುವ ಪ್ರಿಯಾ ಆನಂದ್, ದೊಡ್ಡ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಸ್ಯಾಂಡಲ್ ವುಡ್ ನಲ್ಲಿ ನಟ ಪುನೀತ್ ರಾಜಕುಮಾರ್ ಅವರೊಂದಿಗೆ ‘ರಾಜಕುಮಾರ’, ‘ಜೇಮ್ಸ್’ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ.