ನ್ಯೂಸ್ ನಾಟೌಟ್ : ಸುಳ್ಯದಲ್ಲಿ ಮಹಾ ಕಳ್ಳರ ಗ್ಯಾಂಗ್ ವೊಂದು ತಿರುಗಾಟ ನಡೆಸುತ್ತಿದ್ದು ಅಮಾಯಕರ ಜೇಬಿಗೆ ಕತ್ತರಿ ಹಾಕುತ್ತಿದೆ ಅನ್ನುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ನಾಲ್ವರನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದ ಬಳಿಕ ಬಿಟ್ಟು ಕಳಿಸಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ.
ಈ ಬಗ್ಗೆ ನ್ಯೂಸ್ ನಾಟೌಟ್ ಗೆ ಪ್ರತಿಕ್ರಿಯಿಸಿದ ಸುಳ್ಯ ಠಾಣಾ ಸಬ್ ಇನ್ಸ್ ಪೆಕ್ಟರ್ (ಎಸ್ ಐ) ಜಿ.ಆರ್.ದಿಲೀಪ್ ಅವರು, ಗಾಂಧಿನಗರದ ಬಸ್ ಸ್ಟ್ಯಾಂಡ್ ಬಳಿ ನಡೆದ ಘಟನೆಯ ವಿಡಿಯೋ ವೈರಲ್ ಆದ ಹಿನ್ನೆಲೆಯಲ್ಲಿ ನಾಲ್ವರನ್ನು ಬಂಧಿಸಿ ವಿಚಾರಣೆ ನಡೆಸಿದ್ದೇವೆ. ಅವರು ನಾಲ್ವರು ಗೆಳೆಯರಾಗಿದ್ದು ಪರಸ್ಪರ ಕುಡಿದು ಮತ್ತಿನಲ್ಲಿ ಇಂತಹ ಕೆಲಸ ಮಾಡಿದ್ದಾರೆ. ವಿಡಿಯೋದಲ್ಲಿ ಮಲಗಿದ್ದ ಸ್ಥಿತಿಯಲ್ಲಿದ್ದ ವ್ಯಕ್ತಿ ಗಡ್ಡದಾರಿ ವ್ಯಕ್ತಿಗೆ ೧೩೦ ರೂ.ಕೊಡಬೇಕಿತ್ತು. ಎಷ್ಟು ಕೇಳಿದರೂ ಕೊಟ್ಟಿರಲಿಲ್ಲ. ಇದಕ್ಕಾಗಿ ಆತ ಅವನಿಂದ ಹಣ ತೆಗೆದುಕೊಂಡಿದ್ದಾನೆ. ಇದು ಸ್ನೇಹಿತರ ನಡುವಿನ ಕಿತ್ತಾಟದ ಕಥೆ ಹೊರತು ಕಳ್ಳತನ ಆಗಿರುವುದಲ್ಲ ಎಂದು ತಿಳಿಸಿದ್ದಾರೆ.
ಏನಾಗಿತ್ತು? ಇದರ ಪೂರ್ಣ ವಿಡಿಯೋ ಲಿಂಕ್ ಇಲ್ಲಿದೆ ವೀಕ್ಷಿಸಿ..
ಹೀಗಿದ್ದರೂ ವಿಡಿಯೋದಲ್ಲಿರುವ ನಾಲ್ವರು ವ್ಯಕ್ತಿಗಳ ಬಗ್ಗೆ ಜನರು ಇನ್ನೂ ಅನುಮಾನ ವ್ಯಕ್ತಪಡಿಸುತ್ತಿದ್ದಾರೆ. ಹಿಂದೆ ಮುಂದೆ ನೋಡುತ್ತಾ ಎಚ್ಚರಿಕೆಯಿಂದ ಮಲಗಿದ್ದವನ ಕಿಸೆಯಿಂದ ಹಣ ತೆಗೆಯುತ್ತಾನೆ. ಸ್ನೇಹಿತನಾಗಿದ್ದರೆ ಹಣವನ್ನು ಹೀಗೆ ಯಾಕೆ ತೆಗೆಯಬೇಕಿತ್ತು, ಆತನಿಂದ ನೇರವಾಗಿ ಕೇಳಿ ಪಡೆಯಬಹುದಿತ್ತು. ಇದರ ಹಿಂದೆ ಏನೋ ಅನುಮಾನ ಇದೆ ಎಂದು ಜಾಲತಾಣದಲ್ಲಿ ಚರ್ಚಿಸುತ್ತಿದ್ದಾರೆ.