ನ್ಯೂಸ್ ನಾಟೌಟ್ : ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದಿಂದ ದಕ್ಷಿಣ ಕನ್ನಡದ ಸುಳ್ಯ, ಬೆಳ್ಳಾರೆ ಹಾಗೂ ಪುತ್ತೂರು ಭಾಗಗಳಲ್ಲಿ ಉದ್ವಿಗ್ನತೆ ಉಂಟಾಗಿದೆ. ಈ ಹಿನ್ನೆಲೆಯಲ್ಲಿ ಮುಂಜಾಗ್ರತೆ ಕ್ರಮವಾಗಿ ಸುಳ್ಯದ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ ಎಂದು ತಿಳಿದು ಬಂದಿದೆ.
ಈಗಾಗಲೇ ಸುಳ್ಯದ ಜ್ಯೋತಿ ವೃತ್ತದ ಬಳಿ ಬಸ್ ಗಳನ್ನು ತಡೆಯಲಾಗಿದೆ. ಹೀಗಾಗಿ ದೂರ ಪ್ರಯಾಣಿಕರು ಇಕ್ಕಟ್ಟಿಗೆ ಸಿಲುಕಿದ್ದಾರೆ. ಮೆಡಿಕಲ್ ಸರ್ವೀಸ್ ಹೊರತುಪಡಿಸಿದಂತೆ ಸುಳ್ಯದ ಎಲ್ಲ ಶಾಪ್ಗಳನ್ನು ಬಂದ್ ಮಾಡಲಾಗಿದೆ ಎಂದು ತಿಳಿದು ಬಂದಿದೆ. ಇದೇ ವೇಳೆ ಸಮಯಕ್ಕೆ ಸರಿಯಾಗಿ ಸೂಕ್ಷ್ಮತೆಯಿಂದ ಮಕ್ಕಳಿಗೆ ರಜೆ ನೀಡದಿರುವುದಕ್ಕೆ ಜಿಲ್ಲಾಡಳಿತದ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಕೆಲವು ಮಕ್ಕಳು ಮನೆಯಿಂದ ಶಾಲೆಗೆ ಹೊರಟು ಬಂದು ಇದೀಗ ಸುಳ್ಯದಿಂದ ಮರಳಿ ಮನೆಗೆ ತೆರಳುವುದಕ್ಕೂ ಬಸ್ ಇಲ್ಲದೆ ಸಿಲುಕಿಕೊಂಡಿದ್ದಾರೆ ಎನ್ನಲಾಗಿದೆ.