ನ್ಯೂಸ್ ನಾಟೌಟ್: ತಡರಾತ್ರಿ ಭಾರಿ ಕಂಪನದಿಂದ ಭೂಮಿ ನಡುಗಿದ್ದು ಕೊಡಗು ಹಾಗೂ ದಕ್ಷಿಣ ಕನ್ನಡದ ಗಡಿ ಭಾಗದ ಜನರು ಕಂಗಾಲಾಗಿದ್ದಾರೆ.
1.8 ತೀವ್ರತೆ ದಾಖಲಾಗಿತ್ತು ಎಂದು ಕರ್ನಾಟಕ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ (KSNDM) ಸ್ಪಷ್ಟಪಡಿಸಿದೆ. ಕಂಪನವು ಭೂಮಿಯ 10 ಕಿ.ಮೀ ಆಳದಲ್ಲಿ ನಡೆದಿದೆ ಎನ್ನಲಾಗಿದೆ. ಎಂ. ಚೆಂಬು ಹಾಗೂ ಪೆರಾಜೆ ಗ್ರಾಮದ ಕೇಂದ್ರ ಬಿಂದುವಿನಿಂದ ಮುಂಜಾನೆ 1.15ಕ್ಕೆ ಭೂಕಂಪನ ಸಂಭವಿಸಿತ್ತು. ಕಂಪನಕ್ಕೆ ಹೆದರಿದ ಜನ ಮನೆಯಿಂದ ಹೊರಗೆ ಓಡಿದ್ದರು. ತಡರಾತ್ರಿಯ ಈ ಬೆಳವಣಿಗೆಯ ಬಗ್ಗೆ ಪ್ರತಿಕ್ರಿಯಿಸಿರುವ ಕರ್ನಾಟಕ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ಜನರು ಯಾವುದೇ ಆತಂಕಕ್ಕೆ ಒಳಗಾಗಬೇಕಾದ ಅಗತ್ಯವಿಲ್ಲ ಎಂದು ತಿಳಿಸಿದ್ದಾರೆ.