ನ್ಯೂಸ್ ನಾಟೌಟ್: ಭೂಕಂಪದ ಭಯದ ನೆರಳಲ್ಲಿ ಬದುಕುತ್ತಿರುವ ಕೊಡಗು ಹಾಗೂ ದಕ್ಷಿಣ ಕನ್ನಡ ಗಡಿ ಭಾಗದ ಜನರಿಗೆ ಈಗ ದಿನನಿತ್ಯ ಜೋರಾದ ಶಬ್ಧ ಹಾಗೂ ಲಘು ಕಂಪನಗಳೊಂದಿಗೆ ಬದುಕುವಂತಾಗಿದೆ.
ಸರಣಿ ಕಂಪನ ಅನುಭವಿಸಿ ಚಿಂತೆಯಲ್ಲಿರುವ ಪೆರಾಜೆ ಹಾಗೂ ಚೆಂಬುವಿನಲ್ಲಿ ಇದೀಗ ಭಾನುವಾರ ರಾತ್ರಿ 9.15 ರಿಂದ 9.20 ರ ವೇಳೆಯಲ್ಲಿ ಕಂಪನದ ಅನುಭವ ಆಗಿದೆ ಎಂದು ಪೆರಾಜೆಯಿಂದ ಅನಿತಾ ಹಾಗೂ ಚೆಂಬುವಿನಿಂದ ದಿನೇಶ್ ಅನ್ನುವವರು ನ್ಯೂಸ್ ನಾಟೌಟ್ ಗೆ ತಿಳಿಸಿದ್ದಾರೆ. ಮೊದಲಿಗೆ ಶಬ್ಧ ಹಾಗೂ ನಂತರ ಸಣ್ಣ ಮಟ್ಟಿನ ಕಂಪನ ಆಗಿದೆ ಎಂದು ತಿಳಿಸಿದ್ದಾರೆ. ಹಿಂದಿನ ಕಂಪನಗಳಿಗೆ ಹೋಲಿಸಿದರೆ ಇದು ಲಘು ಪ್ರಮಾಣದಲ್ಲಿತ್ತು ಎನ್ನಲಾಗಿದೆ. ಕಳೆದ ಕೆಲವು ದಿನಗಳಿಂದ ಕೊಡಗು ಗಡಿ ಭಾಗ ಸಂಪಾಜೆ, ಗೂನಡ್ಕ, ಅರಂತೋಡು, ಪೆರಾಜೆ, ಸುಳ್ಯ ತಾಲೂಕಿನ ಹಲವು ಕಡೆ ಕಂಪನದ ಅನುಭವ ಆಗಿರುವುದನ್ನು ಸ್ಮರಿಸಬಹುದು.