ನ್ಯೂಸ್ ನಾಟೌಟ್ : ಉಡುಪಿಯ ಪ್ರತಿಷ್ಠಿತ ಕಾಲೇಜೊಂದರಲ್ಲಿ ಉಪನ್ಯಾಸಕನಾಗಿ ಕೆಲಸ ಮಾಡುತ್ತಿದ್ದ ಯುವಕನೋರ್ವ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.
ಕಡಬ ತಾಲೂಕಿನ ನೆಲ್ಯಾಡಿಯ ಆರ್ಲ ಎಂಬಲ್ಲಿನ ಆನಂದ್(33 ವರ್ಷ) ಎನ್ನುವವರು ಆತ್ಮಹತ್ಯೆ ಮಾಡಿಕೊಂಡವರು. ಇವರಿಗೆ ಮೂರು ತಿಂಗಳ ಹಿಂದೆಯಷ್ಟೇ ವಿವಾಹವಾಗಿತ್ತು. ಈ ಸಂದರ್ಭ ಹೊಸ ಕಾರನ್ನು ಖರೀದಿಸಿದ್ದರು ಎಂದು ತಿಳಿದು ಬಂದಿದೆ.ಉಜಿರೆಯಲ್ಲಿ ಸೈನ್ಸ್ ಸ್ಟುಡೆಂಟ್ ಆಗಿದ್ದ ಇವರು ಓದಿನಲ್ಲಿ ಮುಂಚೂಣಿಯಲ್ಲಿದ್ದರು. ಮೃತ ಆನಂದ್ ತಂದೆ ಚಂದಪ್ಪ, ಅಕ್ಕ ವಿಜಯಾ ಹಾಗೂ ಅಣ್ಣ ಸತೀಶ್ ಅವರನ್ನು ಅಗಲಿದ್ದಾರೆ. ಆತ್ಮಹತ್ಯೆಯ ನಿಖರ ಕಾರಣ ಇನ್ನಷ್ಟೇ ತಿಳಿದು ಬರಬೇಕಿದೆ.