ನ್ಯೂಸ್ ನಾಟೌಟ್ : ಬೆಳ್ತಂಗಡಿ ತಾಲೂಕಿನ ಉಜಿರೆಯ ವಿವಾಹಿತ ಮಹಿಳೆಯೊಬ್ಬರು ತಮ್ಮ 9 ತಿಂಗಳ ಮಗುವಿನೊಂದಿಗೆ ನಾಪತ್ತೆಯಾಗಿರುವ ಪ್ರಕರಣ ಬೆಳಕಿಗೆ ಬಂದಿದೆ.
ನಿನ್ನಿಕಲ್ಲು ಎಂಬಲ್ಲಿನ ಯುವತಿ ಪ್ರಜೀತ(27ವ) ಅವರು ತಮ್ಮ 9 ತಿಂಗಳ ಮಗು ಸುಮಂತ್ ಜತೆಗೆ ನಾಪತ್ತೆಯಾಗಿರುವವರಾಗಿದ್ದಾರೆ. ಪ್ರಜೀತ ಅವರ ಪತಿ ಆಟೋ ಚಾಲಕರಾಗಿದ್ದು ಈ ಘಟನೆ ನಡೆಯುವಾಗ ಕೆಲಸಕ್ಕೆ ಹೋಗಿದ್ದರು ಎನ್ನಲಾಗಿದೆ. ಅವರ ತಾಯಿ ಹುಲ್ಲಿಗೆಂದು ತೋಟಕ್ಕೆ ಹೋಗಿದ್ದು ಪ್ರಜಿತ ಯಾವ ಕಾರಣಕ್ಕೆ ಇಂತಹ ನಿರ್ಧಾರ ತೆಗೆದುಕೊಂಡಿದ್ದಾರೆ ಎನ್ನುವುದು ತಿಳಿದು ಬಂದಿಲ್ಲ. ಪ್ರಜೀತ ಇದುವರೆಗೆ ವಾಪಾಸು ಮನೆಗೆ ವಾಪಸ್ ಬಂದಿಲ್ಲ. ಸಂಬಂಧಿಕರ ಮನೆಗೂ ಹೋಗಿಲ್ಲ ಎಂದು ಕುಟುಂಬ ಸದಸ್ಯರು ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.